ಮಂಜೇಶ್ವರ ಎಕ್ಸೈಸ್ ಚೆಕ್ಪೋಸ್ಟ್ ಎದುರು ನಡೆಸಿದ ತಪಾಸಣೆಯಲ್ಲಿ ಕೆಎಸ್ಸಾರ್ಟಿಸಿ ಬಸ್ನಿಂದ ಲಹರಿಮರೆಯೊಂದಿಗೆ ಯುವಕನೊಬ್ಬನನ್ನು ಎಕ್ಸೈಸ್ ಅಧಿಕಾರಿಗಳು ಬಂಧಿಸಿದ್ದಾರೆ. ಮಂಗಳೂರಿನಿಂದ ಕಾಸರಗೋಡಿಗೆ ತೆರಳುತ್ತಿದ್ದ KL 15 – 9995 ಸಂಖ್ಯೆಯ ಕೆಎಸ್ಸಾರ್ಟಿಸಿ ಬಸ್ನಲ್ಲಿ ಈ ತಪಾಸಣೆ ನಡೆಸಲಾಯಿತು.
ಹೊಸದುರ್ಗ ಪನಯಾಲ್ ನಿವಾಸಿ ರಾಜೀವನ್ ಅವರ ಪುತ್ರ ಗೋಕುಲ್ ರಾಜೀವ್ ಎಂಬಾತನಿಂದ 0.52 ಗ್ರಾಂ ಮೆಥಾಂಫೆಟಮಿನ್ ಹಾಗೂ 2.38 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.ಮಂಜೇಶ್ವರ ಎಕ್ಸೈಸ್ ಚೆಕ್ಪೋಸ್ಟ್ನ ಎಕ್ಸೈಸ್ ಇನ್ಸ್ಪೆಕ್ಟರ್ ಆದರ್ಶ್ ಜಿ. ಅವರ ನೇತೃತ್ವದ ತಂಡವು ಲಹರಿಮರೆಯನ್ನು ಪತ್ತೆಹಚ್ಚಿ ಆರೋಪಿಯನ್ನು ಕಸ್ಟಡಿಗೆ ಪಡೆದುಕೊಂಡಿತು. ಈ ಸಂಬಂಧ ಆರೋಪಿಯ ವಿರುದ್ಧ ಎಕ್ಸೈಸ್ ಕಾಯ್ದೆಯನ್ವಯ ಪ್ರಕರಣ ದಾಖಲಿಸಲಾಗಿದೆ.ಘಟನೆಯ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಎಕ್ಸೈಸ್ ಅಧಿಕಾರಿಗಳು ತಿಳಿಸಿದ್ದಾರೆ.