ಮಂಗಳೂರು: ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯನ್ನು ಮತ್ತಷ್ಟು ಸುಸಜ್ಜಿತಗೊಳಿಸಲು ₹70 ಕೋಟಿಯಷ್ಟು ಅನುದಾನವನ್ನು ನೀಡಲು ರಾಜ್ಯ ಸರ್ಕಾರ ಯೋಜನೆ ರೂಪಿಸಿದೆ. ಮೊದಲ ಹಂತವಾಗಿ ಈಗಾಗಲೇ ₹35 ಕೋಟಿ ಅನುದಾನ ಬಿಡುಗಡೆ ಮಾಡಲು ಆದೇಶ ಮಾಡಿದೆ. ಹಾಗೆಯೇ ಕೆಎಂಸಿ ಯೊಂದಿಗೆ ಸುಮಾರು ₹100 ಕೋಟಿ ಮೊತ್ತದ ಅನುದಾನ ಪಡೆಯಲು ಚರ್ಚೆ ನಡೆಸಲಾಗಿದ್ದು, ಸದ್ಯದಲ್ಲಿಯೇ ಆ ಯೋಜನೆಯೂ ಕಾರ್ಯರೂಪಕ್ಕೆ ಬರಲಿದೆ. ಮಾನವ ಸಂಪನ್ಮೂಲ ನಿರ್ವಹಣೆ ಮತ್ತು ಸದೃಢ ಆಡಳಿತ ವ್ಯವಸ್ಥೆಗಾಗಿ ಪ್ರಸ್ತುತ ಇರುವ ಡಿಸ್ಟ್ರಿಕ್ಟ್ ಸರ್ಜನ್ (ಮುಖ್ಯ ವೈದ್ಯರ) ಹುದ್ದೆಯನ್ನು
ಮೆಡಿಕಲ್ ಸೂಪರಿಂಟೆಂಡೆಂಟ್ ಹುದ್ದೆಯಾಗಿ ಮೇಲ್ದರ್ಜೆಗೆ ಏರಿಸಿ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಆದೇಶ ಮಾಡಿದ್ದಾರೆ.