ಪಲ್ಲೇದಪಡ್ಪು: ಗ್ರಾಮೀಣ ಪ್ರದೇಶದ ಯುವಕರನ್ನು ಒಟ್ಟುಸೇರಿಕೊಂಡು ಕ್ರೀಡಾಸಕ್ತರ ಅಂಡರ್ ಆರ್ಮ್ ಪಿ ಪಿ ಎಲ್ ಕ್ರಿಕೆಟ್ ಪಂದ್ಯಕೂಟ ವರ್ಕಾಡಿ ಪಂಚಾಯತ್ ಮೈದಾನ ಸುಂಕದಕಟ್ಟೆಯಲ್ಲಿ ಜರಗಿತು.
ಕ್ರೀಡಾಕೂಟದ ಉದ್ಘಾಟನೆಯನ್ನು ಯುವ ಉದ್ಯಮಿ ಕಾರ್ತಿಕ್ ಎಂಟರ್ಪ್ರೈಸಸ್ ಮಾಲಕ ಪ್ರಕಾಶ್ ಪೊಯ್ಯತ್ತಬೈಲ್ ನೆರವೇರಿಸಿದರು.
ಕ್ಲಬ್ ನ ಅಧ್ಯಕ್ಷರಾದ ವಜ್ರೇಶ್ ಕಣಿಯೂರುರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ರಾಜರಾಜೇಶ್ವರಿ ಭಜನಾ ಮಂಡಳಿ ಪಲ್ಲೇದಪಡ್ಪು ಇದರ ಅಧ್ಯಕ್ಷರಾದ ಪುರುಷೋತ್ತಮ ಶೆಟ್ಟಿ,ಗೋಪಾಲ ಶೆಟ್ಟಿ ಬಗಂಬಿಲ,ರಮೇಶ್ ಆಚಾರ್ಯ,ರಾಜೇಶ್ ಪರಂದಳ,ಸುರೇಶ್,ಮನೋಜ್ ಶೆಟ್ಟಿ,ಚಂದ್ರ ಶೇಖರ ಪಜ್ವ ಮೊದಲಾದವರು ಉಪಸ್ಥಿತರಿದ್ದರು.
ಸಂಜೆ ಜರಗಿದ ಸಮಾರೋಪ ಸಮಾರಂಭದಲ್ಲಿ ಅಶೋಕ್ ಕೊಡ್ಲಮೊಗರು,ರಾಜೇಶ್ ,ಸತೀಶ್ ಪಿ ಕೆ,ವಜ್ರೇಶ್ ಮೊದಲಾದವರು ಉಪಸ್ಥಿತರಿದ್ದು ವಿಜೇತರಿಗೆ ಬಹುಮಾನ ವಿತರಿಸಿದರು.
ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಎಸ್ ಆರ್ ಎಪ್ ಸಿ ಕಿಂಗ್ಸ್ ಮತ್ತು ದ್ವಿತೀಯ ಸ್ಥಾನವನ್ನು ಎಸ್ ಆರ್ ಎಪ್ ಸಿ ಗ್ಯಾಂಗ್ಸ್ಟರ್ಸ್ ಪಡೆದುಕೊಂಡರು. ರೋಹಿತಾಕ್ಷ ಬೀಡು ಕಾರ್ಯಕ್ರಮ ನಿರೂಪಿಸಿದರು.