ಮಂಜೇಶ್ವರ: ಪೊಸೋಟ್ ಮಹಲ್ಲ್ ಯೂತ್ ವಿಂಗ್ ವತಿಯಿಂದ ಆಯೋಜಿಸಿದ್ದ ರಕ್ತದಾನ ಶಿಬಿರವು ಪೊಸೋಟ್‌ನ ಆಯಿಷಾ ಟವರ್ ಸಮೀಪ ನಡೆಯಿತು. ಬೆಳಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ನಡೆದ ಶಿಬಿರದಲ್ಲಿ ಸಾರ್ವಜನಿಕರು ಹಾಗೂ ಯುವಕರು ಭಾಗವಹಿಸಿ ರಕ್ತದಾನ ಮಾಡಿದರು.



ಶಿಬಿರವನ್ನು 11ನೇ ವಾರ್ಡ್ ಸತ್ಯಡ್ಕ ಸದಸ್ಯೆ ಫಾತಿಮತ್ ಥಮ್ಸೀನಾ (ಜಸ್ಸಿ) ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೊಸೋಟ್ ಯೂತ್ ವಿಂಗ್ ಚೇರ್ಮನ್ ಸಿದ್ದೀಕ್ ಮಂಡ್ರಿ ವಹಿಸಿದ್ದರು. ಅಧ್ಯಕ್ಷ ಮನ್ಸೂರ್ ಬಿ.ಎಂ., ಕಾರ್ಯದರ್ಶಿ ಸಿರಾಜ್ ಬಿ.ಎಸ್., ಖಜಾಂಚಿ ಜಸ್ಸಿ ಪೊಸೋಟ್ ಹಾಗೂ ಸಲಹೆಗಾರ ಮೊಯ್ದೀನ್ ಪಿ.ಕೆ. ಉಪಸ್ಥಿತರಿದ್ದರು.





ಈ ಸಂದರ್ಭದಲ್ಲಿ ಹಮೀದ್ ಲುಲು, ಹನೀಫ್ ಮನ್ಸೂರ್, ರಝಾಕ್ ಅಜ್ಜು, ಜಾಫರ್ ಬಾವ ಹಾಜಿ, ಜಮ್‌ಜಮ್ ಮಹ್ಮೂದ್ ಹಾಜಿ ಹಾಗೂ ಅಬ್ದುಲ್ ರಹಿಮಾನ್ ಹಾಜಿ ಸೇರಿದಂತೆ ಸಂಘಟನೆಯ ಸದಸ್ಯರು ಹಾಗೂ ಗಣ್ಯರು ಭಾಗವಹಿಸಿದ್ದರು.
ರಕ್ತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸುವ ಹಾಗೂ ಅಗತ್ಯವಿರುವವರಿಗೆ ರಕ್ತದ ಲಭ್ಯತೆ ಕಲ್ಪಿಸುವ ಉದ್ದೇಶದಿಂದ ಶಿಬಿರವನ್ನು ಆಯೋಜಿಸಲಾಗಿತ್ತು. “ರಕ್ತದಾನ ಜೀವ ಉಳಿಸುವ ಮಹಾದಾನ” ಎಂಬ ಸಂದೇಶದೊಂದಿಗೆ ನಡೆದ ಶಿಬಿರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.


