ಮಣ್ಣಂಗುಝಿಯಲ್ಲಿ ಭೀಕರ ರಸ್ತೆ ಅಪಘಾತ-ನಾಲ್ವರು ಯುವಕರಿಗೆ ಗಾಯ

ಉಪ್ಪಳ : ಉಪ್ಪಳ ಮಣ್ಣಂಗುಝಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಯುವಕರು ಗಾಯಗೊಂಡಿದ್ದಾರೆ. ಮಣ್ಣಂಗುಝಿ ಪರಿಸರ ನಿವಾಸಿಗಳಾದ ಶಾಹಿಲ್ (22), ಮನಾಫ್ (19), ಫಹಾಲ್ (19) ಹಾಗೂ ರಾಶಿದ್ (25) ಗಾಯಗೊಂಡವರು.

ಎರಡು ಕಾರುಗಳಲ್ಲಿ ಪ್ರಯಾಣಿಸುತ್ತಿದ್ದ ಯುವಕರು ಬಾಯಾರು ಭಾಗದತ್ತ ತೆರಳುತ್ತಿದ್ದ ವೇಳೆ, ಮಣ್ಣಂಗುಝಿ ಇಳಿಜಾರಿನಲ್ಲಿ ಮುಂದೆ ಸಾಗುತ್ತಿದ್ದ ಕಾರು ರಸ್ತೆ ಬದಿಗೆ ತಿರುಗಿಸುವ ಸಂದರ್ಭ ಹಿಂದಿನಿಂದ ಬಂದ ಮತ್ತೊಂದು ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಯಿಂದ ಎರಡೂ ಕಾರುಗಳು ನಿಯಂತ್ರಣ ತಪ್ಪಿ ಪಲ್ಟಿಯಾಗಿವೆ.

ಅಪಘಾತದಲ್ಲಿ ನಾಲ್ವರು ಯುವಕರು ಗಾಯಗೊಂಡಿದ್ದು, ಸ್ಥಳೀಯರ ತಕ್ಷಣದ ಸಹಕಾರದಿಂದ ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿದೆ. ಅಪಘಾತದ ಕುರಿತು ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!