ಕಾಸರಗೋಡು : ಜಿಲ್ಲಾ ಸ್ಪೋರ್ಟ್ಸ್ ಕೌನ್ಸಿಲ್ ಕಚೇರಿಯ ಮೇಲೆ ವಿಜಿಲೆನ್ಸ್ ನಡೆಸಿದ ದಾಳಿಯಲ್ಲಿ ಸಾಲು ಸಾಲು ಅಕ್ರಮಗಳು ಬೆಳಕಿಗೆ ಬಂದಿವೆ. 2025ರ ಸೆಪ್ಟೆಂಬರ್ 29ರಂದು ಚೆರ್ವತ್ತೂರಿನಲ್ಲಿ ನಡೆದ ಜಿಲ್ಲಾ ಕಂದಾಯ ಬಿಲ್ಲುಗಾರಿಕೆ ಕೂಟದಲ್ಲಿ ಅರ್ಹತೆಯೇ ಇಲ್ಲದ ಇಬ್ಬರು ಸ್ಪರ್ಧಿಗಳನ್ನು ರಾಜ್ಯ ಮಟ್ಟಕ್ಕೆ ಅಕ್ರಮವಾಗಿ ಆಯ್ಕೆ ಮಾಡಿರುವುದು ಪತ್ತೆಯಾಗಿದೆ.

ಈ ಅಕ್ರಮದ ಹಿಂದಿರುವ ಕೈಗಳ ಹಾಗೂ ಆ ಕ್ರೀಡಾಪಟುಗಳ ಬಗ್ಗೆ ಆಳವಾದ ತನಿಖೆ ನಡೆಯಲಿದೆ.ಇಷ್ಟೇ ಅಲ್ಲದೆ, ಕೌನ್ಸಿಲ್ ಅಧೀನದ ಈಜುಕೊಳದ ಗುತ್ತಿಗೆದಾರನಿಂದ ಕಚೇರಿಯ ತಾತ್ಕಾಲಿಕ ಅಸಿಸ್ಟೆಂಟ್ ಗೂಗಲ್ ಪೇ ಮೂಲಕ ರೂ. 38,400 ಲಂಚ ಪಡೆದಿರುವುದು ತಪಾಸಣೆಯಲ್ಲಿ ಧೃಡಪಟ್ಟಿದೆ. ಈ ಕುರಿತು ಸಂಪೂರ್ಣ ವರದಿ ಸಿದ್ಧಪಡಿಸಿ ಶೀಘ್ರವೇ ವಿಜಿಲೆನ್ಸ್ ಡೈರೆಕ್ಟರ್‌ಗೆ ಸಲ್ಲಿಸಿ, ಮುಂದಿನ ಕಾನೂನು ಕ್ರಮ ಜರುಗಲಿದೆ.
ರಾಜ್ಯಾದ್ಯಂತ ನಡೆದ ಈ ಮಿಂಚಿನ ದಾಳಿಯಲ್ಲಿ ಇತರ ಜಿಲ್ಲೆಗಳ ಸ್ಪೋರ್ಟ್ಸ್ ಕೌನ್ಸಿಲ್‌ಗಳಲ್ಲೂ ಭಾರೀ ಅಕ್ರಮಗಳು ಬೆಳಕಿಗೆ ಬಂದಿವೆ.


