ಮಂಜೇಶ್ವರ:ಶ್ರೀ ದೇವಿ ಕೃಪಾ ಫ್ರೆಂಡ್ಸ್ ಕ್ಲಬ್ ಸಂಸ್ಥೆಯ 30ನೇ ವಾರ್ಷಿಕೋತ್ಸವ ಸಂಭ್ರಮಾಚರಣೆ ಫೆಬ್ರವರಿ 21, 2026ರಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.
ಬೆಳಿಗ್ಗೆ 9.00ಕ್ಕೆ ಧ್ವಜಾರೋಹಣ ನಡೆಯಲಿದ್ದು, ಸಂಜೆ 7.00ಕ್ಕೆ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈಶಿಷ್ಟ್ಯ ಕಾರ್ಯಕ್ರಮಗಳು ಜರುಗಲಿವೆ. ರಾತ್ರಿ 8.00ಕ್ಕೆ ಸಭಾ ಕಾರ್ಯಕ್ರಮ ಆಯೋಜಿಸಲಾಗಿದೆ.ವಿವಿಧ ಗಣ್ಯರು ಹಾಗೂ ಸಮಾಜದ ಪ್ರಮುಖರು ಭಾಗವಹಿಸಲಿದ್ದಾರೆ.
ರಾತ್ರಿ ಗಂಟೆ 9.00ರಿಂದ ಶ್ರೀ ದುರ್ಗಾ ಕಲಾವಿದರು ಹೊಯಿಗೆಗುಡ್ಡ – ಸಸಿಹಿತ್ಲು ಅಭಿನಯಿಸುವ “ಬಿತ್ ಲ್ದ ಉಲ್ಲಾಲ್ದಿ ಅಪ್ಪೆ ಭಗವತಿ ” ತುಳು ಪೌರಾಣಿಕ ನಾಟಕ ನಡೆಯಲಿದೆ.