ಬೇಡಡ್ಕದಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ ಯತ್ನಗಳು; ಸಂಕಷ್ಟದಲ್ಲಿರುವವರಿಗೆ ಪೊಲೀಸರ ಮನವಿ

ಕಾಸರಗೋಡು : ಬೇಡಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆತ್ಮಹತ್ಯೆ ಪ್ರಕರಣಗಳು ಮತ್ತು ಯತ್ನಗಳು ಆತಂಕಕಾರಿ ರೀತಿಯಲ್ಲಿ ಹೆಚ್ಚುತ್ತಿವೆ.ಉನ್ನತಿಯಲ್ಲಿ ವಾಸವಿದ್ದ 16 ವರ್ಷದ ಬಾಲಕನೊಬ್ಬ ಇಲಿ ವಿಷ ಸೇವಿಸಿದ್ದು, ಗಂಭೀರ ಸ್ಥಿತಿಯಲ್ಲಿ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೊದಲು ಬೇಡಡ್ಕ ತಾಲೂಕು ಆಸ್ಪತ್ರೆಯಲ್ಲಿ ಪರೀಕ್ಷಿಸಿ, ನಂತರ ಹೆಚ್ಚಿನ ಚಿಕಿತ್ಸೆಗೆ ರವಾನಿಸಲಾಗಿದೆ.ಇತ್ತೀಚೆಗೆ ತೋರೋತ್ ನಿವಾಸಿ ಟಿ. ಅನಶ್ವರ (19) ಎಂಬ ಪ್ಲಸ್ ಟು ಮುಗಿಸಿದ್ದ ಯುವತಿ ಇಲಿ ವಿಷ ಸೇವಿಸಿ ಜೀವ ಕಳೆದುಕೊಂಡಿದ್ದಳು.

ಇದರ ಬೆನ್ನಲ್ಲೇ, ಅದೇ ಪ್ರದೇಶದ ಮೂವರ ಹರೆಯದ ಗೃಹಿಣಿಯೊಬ್ಬರು ಸ್ನಾನದ ಗೃಹದಲ್ಲಿ ಕೈಯ ನರ ಕತ್ತರಿಸಿ, ಮೈಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಮೃತ್ಯುವಿನೊಂದಿಗೆ ಹೋರಾಡುತ್ತಿದ್ದಾರೆ.

ಸಣ್ಣಪುಟ್ಟ ಕಾರಣಗಳಿಗೂ ಪ್ರಾಣ ಕಳೆದುಕೊಳ್ಳುವ ಈ ದುಷ್ಪ್ರವೃತ್ತಿ ನಾಡನ್ನು ಬೆಚ್ಚಿಬೀಳಿಸಿದೆ.

​ಈ ಸರಣಿ ದುರಂತಗಳ ಹಿನ್ನೆಲೆಯಲ್ಲಿ ಬೇಡಡ್ಕ ಇನ್ಸ್‌ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್ ಬಿಡುಗಡೆ ಮಾಡಿದ್ದ ಜಾಗೃತಿ ಧ್ವನಿ ಸಂದೇಶ ವೈರಲ್ ಆಗಿದ್ದು, ಸಂಕಷ್ಟದಲ್ಲಿರುವವರು ಪೊಲೀಸರ ಸಹಾಯ ಪಡೆಯುವಂತೆ ಮನವಿ ಮಾಡಲಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!