‘ಕೇರಳಾ ಸ್ಟೋರಿ–2’ ಪ್ರದರ್ಶನಕ್ಕೆ ತಾತ್ಕಾಲಿಕ ತಡೆ: ಕೇರಳ ಹೈಕೋರ್ಟ್ ಆದೇಶ

ಎರ್ನಾಕುಳಂ: ಕೇರಳವನ್ನು ಕಪೋಲಕಲ್ಪಿತ ಪೂರ್ವಾಗ್ರಹ ಪೀಡಿತವಾಗಿ ಚಿತ್ರೀಕರಿಸಿದ ವಿವಾದ ಸಿನಿಮಾ ‘ಕೇರಳಾ ಸ್ಟೋರಿ-2’ ಪ್ರದರ್ಶನವನ್ನು ವಿಚಾರಣೆ ಮತ್ತು ವೀಕ್ಷಣೆ ನಡೆಯುವ ತನಕ ಕೇರಳ ಉಚ್ಛ ನ್ಯಾಯಾಲಯ ಪ್ರದರ್ಶನ ಆಗದಂತೆ ನಿಷೇಧಿಸಿದೆ.ಪ್ರಸ್ತುತ ಸಿನೆಮಾದ ಆಶಯ ಮತ್ತು ಕಥೆ ಕೇರಳದ ಜಾತ್ಯಾತೀತ ಸಾಮರಸ್ಯ ಬದುಕಿನ ಸಹಜ ವಾತಾವರಣದ ನೖಜತೆಗಿಂತ ತುಂಬಾ ಭಿನ್ನವಾಗಿ, ಕೇರಳ ಕಾಪಾಡಿದ ಮಾನವೀಕತೆಯನ್ನೇ ಅಣಕಿಸುವ ಮತ್ತು ಕೇರಳ ಕಾಪಾಡಿದ ಪ್ರಜಾತಂತ್ರ ಮೌಲ್ಯಗಳನ್ನು ಬಾಧಿಸುವ ಮಟ್ಟದಲ್ಲಿದೆ ಎಂದು ಆರೋಪಿಸಿ ಸಿನಿಮ ಪ್ರದರ್ಶನ ತಡೆಯಬೇಕೆಂಬ ನಾಗರಿಕ ಹಿತಾಸಕ್ತಿಯಂತೆ ಸಲ್ಲಿಸಲ್ಪಟ್ಟಿದ ನಾಗರಿಕ ಕಾಳಜಿಯ ಅರ್ಜಿ ಪರಿಗಣಿಸಿ ಹೖಕೋರ್ಟು ಈ ತೀರ್ಪು ನೀಡಿದೆ.

ಸಿನಿಮಾ ವೀಕ್ಷಿಸಿ ನ್ಯಾಯಾಲಯವೇ ಸಹಜತೆಯನ್ನು ನಿರ್ಣಯಿಸಬೇಕೆಂಬ ಮನವಿಯ ಹಿನ್ನೆಲೆಯಲ್ಲಿ ಸಿನಿಮಾ ವೀಕ್ಷಣೆಗಾಗಿ ಪ್ರದರ್ಶನ ತಡೆ ಹಿಡಿಯಲಾಗಿದೆ. ಆದರೆ ಸೆನ್ಸಾರ್ ಮಂಡಳಿಗೆ ಪರ್ಯಾಯವಲ್ಲ ನ್ಯಾಯಾಲಯ ಎಂಬ ವಾದಕ್ಕೆ ಹೖಕೋರ್ಟು ಪ್ರಬಲ ಆಕ್ಷೇಪ ಪ್ರಕಟಿಸಿದೆ. ಕೇರಳಕ್ಕೆ ಕಳಂಕ ಹಚ್ಚುವ ಮತ್ತು ಕೇರಳದ ಸಹಜತೆಗಿಂತ ಭಿನ್ನವಾದ ಕಪೋಲಕಲ್ಪಿತವಾದ ಜನತಾ ಪ್ರಭಿವದ ಚಿತ್ರಕಥೆ ಇದೆಯೋ ಎಂದರಿಯಲು ಸಿನಿಮ ವೀಕ್ಷಿಸಲೇ ಬೇಕಾಗಿದೆ. ಆ ತನಕ ಸಾರ್ವಜನಿಕರಿಗೆ ಸಿನಿಮ ಪ್ರದರ್ಶಿಸುವಂತಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಕೇಸನ್ನು ನ್ಯಾಯಾಲಯ ಗುರುವಾರ ಬೆಳಿಗ್ಗೆ ಪುನರ್ ಪರಿಗಣಿಸಲಿದೆ

SHARE
Loading spinner

Leave a Reply

Your email address will not be published. Required fields are marked *

error: Content is protected !!