ನಡು ರಸ್ತೆಯಲ್ಲಿ ಕಲ್ಲು ಹಿಡಿದು ಇಬ್ಬರ ಹೊಡೆದಾಟ – ವಿಡಿಯೋ ವೈರಲ್

ಮಂಗಳೂರು, ಫೆ.27: ಕ್ಷುಲ್ಲಕ ಕಾರಣಕ್ಕೆ ಇಬ್ಬರು ವ್ಯಕ್ತಿಗಳು ನಡು ರಸ್ತೆಯಲ್ಲಿ ಕಲ್ಲು ಹಿಡಿದು ಹೊಡೆದಾಡಿಕೊಂಡ ಘಟನೆ ಮಂಗಳೂರು ನಗರದ ಕಾರ್ ಸ್ಟ್ರೀಟ್ ನಲ್ಲಿ ನಡೆದಿದೆ.

ರಸ್ತೆಯಲ್ಲಿ ಹೊರಳಾಡಿಕೊಂಡು ಇಬ್ಬರೂ ಹೊಡೆದಾಟ ಮಾಡಿದ್ದಾರೆ. ಎರಡು ದಿನಗಳ ಹಿಂದೆ ಘಟನೆ ನಡೆದಿದ್ದು ರಸ್ತೆ ಬದಿ ಮೂಡೆ ಮಾರಾಟಕ್ಕೆ ಇಟ್ಟಿದ್ದನ್ನು ಒಬ್ಬಾತ ಅಪರಿಚಿತ ತುಳಿದುಕೊಂಡು ಹೋಗಿದ್ದಾನೆ. ಇದನ್ನು ಆಕ್ಷೇಪಿಸಿದ ಸ್ಥಳೀಯರೊಬ್ಬರ ಮೇಲೆ ಅಪರಿಚಿತ ವ್ಯಕ್ತಿ ಅಲ್ಲಿಯೇ ನೆಲದಲ್ಲಿದ್ದ ಕಲ್ಲನ್ನು ಎತ್ತಿ ಹಲ್ಲೆ ನಡೆಸಿದ್ದಾನೆ. ಸ್ಥಳೀಯ ವ್ಯಕ್ತಿಯ ತಲೆಯಲ್ಲಿ ರಕ್ತ ಸೋರುತ್ತಿದ್ದರೂ ಯಾರೋ ಒಬ್ಬ ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದಾನೆ.

ಎರಡು ದಿನಗಳ ನಂತರ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.ಈ ಬಗ್ಗೆ ಬಂದರು ಠಾಣೆಯಲ್ಲಿ ಮಾಹಿತಿ ಕೇಳಿದಾಗ, ಎರಡು ದಿನಗಳ ಹಿಂದೆ ಒಬ್ಬರು ವ್ಯಕ್ತಿ ಹಲ್ಲೆಯಾದ ಬಗ್ಗೆ ಬಂದಿದ್ದರು. ಅವರು ಸ್ಥಳೀಯ ಕಾಮತ್ ಕೇಟರ್ಸ್ ನಲ್ಲಿ ಕೆಲಸ ಮಾಡುವವರಾಗಿದ್ದು ಹಲ್ಲೆ ವಿಷಯ ತಿಳಿಸಿದ್ದರು. ಅಪರಿಚಿತ ಎಲ್ಲಿಯವ, ಯಾರೆಂದು ಗೊತ್ತಿಲ್ಲ. ದೂರು ಬೇಡ ಎಂದು ಬಳಿಕ ಹೋಗಿದ್ದರು. ದೂರು ಕೊಟ್ಟಿದ್ದರೆ ಎಫ್‌ಐಆರ್ ಮಾಡುತ್ತಿದ್ದೆವು. ಇವತ್ತು ವಿಡಿಯೋ ಬಂದಿದೆ, ಹಲ್ಲೆ ಕೃತ್ಯ ಆಗುತ್ತಿರುವಾಗಲೂ ಅವನು ವಿಡಿಯೋ ಮಾಡುತ್ತ ನಿಂತಿದ್ದಾನೆ ಎಂದು ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!