ಮಂಗಲ್ಪಾಡಿ ಪಂಚಾಯತ್ 2026–27ರ ಗೋಲ್ಡನ್ ಬಜೆಟ್: ಮಿನಿ ಸಿವಿಲ್ ಸ್ಟೇಷನ್, ಉಪ್ಪಳದಲ್ಲಿ ಆಧುನಿಕ ಬಸ್‌ಸ್ಟ್ಯಾಂಡ್–ಶಾಪಿಂಗ್ ಕಾಂಪ್ಲೆಕ್ಸ್

ಉಪ್ಪಳ: ಮೂಲಸೌಕರ್ಯ ಸೇರಿದಂತೆ ಎಲ್ಲಾ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡು ಮಂಗಲ್ಪಾಡಿ ಗ್ರಾಮಪಂಚಾಯತ್ 2026–27ನೇ ಸಾಲಿನ ಜನಪ್ರಿಯ “ಗೋಲ್ಡನ್ ಬಜೆಟ್” ಅನ್ನು ಉಪಾಧ್ಯಕ್ಷೆ ಶಮೀನಾ ಟೀಚರ್ ಪ್ರಸ್ತುತಪಡಿಸಿದರು.

ಗ್ರಾಮಪಂಚಾಯತ್ ಅಧೀನದಲ್ಲಿರುವ ಎಲ್ಲಾ ಘಟಕ ಸಂಸ್ಥೆಗಳನ್ನು ಒಳಗೊಂಡಂತೆ ಮಿನಿ ಸಿವಿಲ್ ಸ್ಟೇಷನ್ ಮಾದರಿಯಲ್ಲಿ ಆಧುನಿಕ ಕಚೇರಿ ಸಮುಚ್ಚಯವನ್ನು ನಿರ್ಮಿಸಲಾಗುತ್ತದೆ. ಉಪ್ಪಳ ಪಟ್ಟಣದಲ್ಲಿ ಬಿಒಟಿ (BOT) ಆಧಾರದ ಮೇಲೆ ಆಧುನಿಕ ಬಸ್‌ಸ್ಟ್ಯಾಂಡ್–ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣಕ್ಕೂ ಬಜೆಟ್‌ನಲ್ಲಿ ಉಲ್ಲೇಖವಿದೆ. ಬೀಚ್ ಟೂರಿಸಂ ಉತ್ತೇಜಿಸಲು ವಿಶೇಷ ಯೋಜನೆಗಳನ್ನು ರೂಪಿಸಲಾಗುತ್ತದೆ.

ಕ್ಷೇತ್ರವಾರು ಅನುದಾನ

  • ಮೂಲಸೌಕರ್ಯ ಅಭಿವೃದ್ಧಿಗೆ ₹2.34 ಕೋಟಿ
  • ಕೃಷಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ₹65 ಲಕ್ಷ
  • ಹಿಂದುಳಿದ ಜಾತಿ /ಹಿಂದುಳಿದ ವರ್ಗದವರಿಗೆ ಮನೆ ಹಾಗೂ ಮೂಲಸೌಕರ್ಯ, ಅಧ್ಯಯನೋಪಕರಣ ವಿತರಣೆ – ₹61 ಲಕ್ಷ
  • ಮಹಿಳಾ ಶಕ್ತೀಕರಣ ಯೋಜನೆಗಳಿಗೆ ₹58 ಲಕ್ಷ
  • ಶಿಕ್ಷಣ ಕ್ಷೇತ್ರದ ಭೌತಿಕ ಸೌಲಭ್ಯಗಳ ಸುಧಾರಣೆ – ₹60 ಲಕ್ಷ
  • ಅಂಗನವಾಡಿ ಮತ್ತು ಶಾಲೆಗಳಲ್ಲಿ RO ಯುನಿಟ್ ಸ್ಥಾಪನೆ – ₹10 ಲಕ್ಷ
  • ಸ್ಮಾರ್ಟ್ ಕ್ಲಾಸ್ ರೂಂ – ₹10 ಲಕ್ಷ
  • ಆರೋಗ್ಯ ಕ್ಷೇತ್ರದ ಅಭಿವೃದ್ಧಿ – ₹12.50 ಲಕ್ಷ
  • ವಯೋವೃದ್ಧರು ಹಾಗೂ ವಿಶೇಷ ಚೇತನ ಯೋಜನೆಗಳಿಗೆ ₹36 ಲಕ್ಷ
  • ಜಲಸಂಪನ್ಮೂಲ ಅಭಿವೃದ್ಧಿಗೆ ₹25 ಲಕ್ಷ
  • ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ, ಮೊಟ್ಟೆ ಕೋಳಿ ವಿತರಣೆ – ₹33 ಲಕ್ಷ
  • ಮೀನುಗಾರರ ವಿದ್ಯಾರ್ಥಿ ಮಕ್ಕಳಿಗೆ ಲ್ಯಾಪ್‌ಟಾಪ್, ಫರ್ನಿಚರ್ – ₹11 ಲಕ್ಷ

ಒಟ್ಟು ₹43,80,35,668 ರೂ. ಆದಾಯ, ₹43,16,67,527 ರೂ. ವೆಚ್ಚ ಮತ್ತು ಪ್ರಾರಂಭಿಕ ಶೇಷ ಸೇರಿ ₹12,71,18,231 ರೂ. ಉಳಿಕೆ ನಿರೀಕ್ಷೆಯೊಂದಿಗೆ ಬಜೆಟ್ ಮಂಡಿಸಲಾಯಿತು.

ಆಡಳಿತ ಸಮಿತಿಯ ಪ್ರಥಮ ಬಜೆಟ್ ಮಂಡನೆ ಅಂಗವಾಗಿ ಎಲ್ಲಾ ಸಿಬ್ಬಂದಿಗೆ ಚಿನ್ನದ ನಾಣ್ಯ ಹಾಗೂ ಸದಸ್ಯರಿಗೆ ಟ್ಯಾಬ್ಲೆಟ್ ಕಂಪ್ಯೂಟರ್‌ಗಳನ್ನು ಅಧ್ಯಕ್ಷರು ಉಡುಗೊರೆಯಾಗಿ ನೀಡಿದರು.

ಅಧ್ಯಕ್ಷ ಗೋಲ್ಡನ್ ಅಬ್ದುಲ್ ರೆಹಮಾನ್ ಪ್ರಾಸ್ತಾವಿಕ ಭಾಷಣ ಮಾಡಿದರು. ಸ್ಥಾಯಿ ಸಮಿತಿ ಅಧ್ಯಕ್ಷರಾದ ಉಮ್ಮರ್ ಅಪೋಲೊ, ಅಬ್ದುಲ್ ರಾಝಖ್ , ಸುಹೇರಾ ಮೊಹಮ್ಮದ್ , ಕಾರ್ಯದರ್ಶಿ ಶ್ರೀನಿವಾಸನ್ ಪಿ .ವಿ., ಮಾಜಿ ಅಧ್ಯಕ್ಷರು ಹಾಗೂ ನಿರ್ವಹಣಾಧಿಕಾರಿಗಳು ಮಾತನಾಡಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!