ಹುಟ್ಟಿದೆ ನಾನು ಸಾಮಾನ್ಯನಂತೆ
ಬೆಳೆಯುತ್ತಾ ಕಾಡಿತು ನನಗೊಂದು ಚಿಂತೆ
ನನಗೂ ಆಡುವಾಸೆ ಎಲ್ಲರಂತೆ
ದೂರವಿಟ್ಟರು ಯಾರೂ ನನ್ನ ಜೊತೆಯಾಗದಂತೆ.
ಹುಟ್ಟಿದ್ದು ತಾಯಿಯ ಪ್ರೀತಿಯ ವೀರನಾಗಿ
ಬೆಳೆಯುತ್ತಾ ಕಾಯುತ್ತಿತ್ತು ಕೈ ಬಳೆಯ ಸದ್ಧಿಗಾಗಿ
ಅಕ್ಕನ ಅಕ್ಕರೆಯ ತಮ್ಮನಾಗಿ
ಬಯಸುತ್ತಿತ್ತು ಆಕೆ ಬಳೇ ಸರ ತಿಲಕ್ಕಾಗಿ.
ಗಂಡಾಗಿ ಹುಟ್ಟಿ ಹೆಣ್ಣಾಗಿ ಬೆಳೆದು
ಸಮಾಜದ ಹೀಗಳಿಕೆಗೆ ಮನದಲ್ಲೇ ಬೆಂದು
ಹೆತ್ತವರು ದೂರ ತಳ್ಳಿ,ಒಡನಾಡಿಗಳಿಂದ ದೂರ ಸರಿದು
ಸಮಾಜದಲ್ಲಿ ಅನಾಥಳಂತೆ ನನ್ನ ಜೀವನ.
ಜೀವನ ಉದ್ಧರಿಸಲು ಜ್ಞಾನ ಬೇಕಿದೆ
ಅದನ್ನು ತಿಳಿಯಲು ಶಿಕ್ಷಣದ ಕೊರತೆಯಿದೆ
ನಿಮ್ಮಂತೆ ನಾನು ಕಲಿಯಬೇಕು
ಅವಕಾಶ ಕಲ್ಪಿಸಲು ನಿಮ್ಮ ಹೃನ್ಮನ ಕರಗಬೇಕು.
✍️ಹರ್ಷಿತ ಶಾಂತಿಮೂಲೆ
ಕುಬಣೂರು
ಕಾಸರಗೋಡು