ಮಂಗಳೂರು: ತೋಟಬೆಂಗ್ರೆಯ ಲೋಕನಾಥ್ ಎಂಬವರ ಬಾಡಿಗೆ ಮನೆಯಲ್ಲಿ ವಾಸವಿದ್ದ ಸಪನಾ(18) ಯುವತಿ ಮಾ.6 ರಂದು ಎಂದಿನಂತೆ ಬಂದರಿನಲ್ಲಿರುವ ವಿವೇಕ್ ಮಾರ್ಟ್ಗೆ ಕೆಲಸಕ್ಕೆಂದು ಹೋದವರು ವಾಪಾಸು ಬಾರದೆ ಕಾಣೆಯಾಗಿರುವ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದವರ ಚಹರೆ :ಸಫನಾ (18) 4.8 ಅಡಿ ಎತ್ತರ, ಸಾಧಾರಣ ಕಪ್ಪು ಮೈ ಬಣ್ಣ, ದುಂಡಗಿನ ಶರೀರ ಹೋದಿದ್ದು, ಬಿಳಿ ಬಣ್ಣದ ನೆಟ್ ಇರುವ ಚೂಡಿದಾರ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದರು. ಹಿಂದಿ ಭೋಜಪುರಿ ಭಾಷೆ ಮಾತನಾಡುತ್ತಾರೆ.