ಮಂಜೇಶ್ವರ: ವಿಧಾನಸಭಾ ಚುನಾವಣೆಯನ್ನು ಹಿನ್ನೆಲೆ ಮಾಡಿಕೊಂಡು ಎನ್‌ಡಿಎ ಪ್ರಚಾರ ಚಟುವಟಿಕೆಗಳು ಮಂಜೇಶ್ವರ ಕ್ಷೇತ್ರದಲ್ಲಿ ವೇಗ ಪಡೆದುಕೊಂಡಿವೆ. ಇದರ ಭಾಗವಾಗಿ ಕೇಂದ್ರ ಸಚಿವರಾದ ಸುರೇಶ್ ಗೋಪಿ ಅವರು ಕುಂಬಳೆ ಪಟ್ಟಣದಲ್ಲಿ ಗೋಡೆ ಬರಹದ ಮೂಲಕ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಂಜೇಶ್ವರ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಕೆ. ಸುರೇಂದ್ರನ್, ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ, ಎನ್‌ಡಿಎ ಸಂಯೋಜಕ ವಿಜಯ್ ಕುಮಾರ್ ರೈ ಸೇರಿದಂತೆ ಹಲವು ಪ್ರಮುಖ ಮುಖಂಡರು ಉಪಸ್ಥಿತರಿದ್ದರು.
ಇದೇ ವೇಳೆ ರಾಜ್ಯ ಸಮಿತಿ ಸದಸ್ಯರಾದ ವಿ. ರವೀಂದ್ರನ್, ಸುರೇಶ್ ಕುಮಾರ್ ಶೆಟ್ಟಿ, ಕುಂಬಳೆ ಮಂಡಲ ಸಮಿತಿ ಅಧ್ಯಕ್ಷ ಸುನೀಲ್ ಅನಂತಪುರಂ, ವಿಕ್ರಂ ಪೈ, ಸುಧಾಕರ್ ಕಾಮತ್, ಪ್ರೇಮಲತಾ ಎಸ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಚುನಾವಣೆಯನ್ನು ಎದುರಿಸಲು ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಮುಖಂಡರು ಕರೆ ನೀಡಿದರು.