ಅಂಗಡಿಪದವಿನಲ್ಲಿ ಮಾರ್ಚ್ 22ರಂದು ಬೃಹತ್ ರಕ್ತದಾನ ಶಿಬಿರ

ಹೊಸಂಗಡಿ: ಅಂಗಡಿಪದವು, ಶ್ರೀ ಆದಿಶಕ್ತಿ ಭಜನ ಮಂಡಳಿ, ಆದಿಶಕ್ತಿ ತರವಾಡು ಕ್ಷೇತ್ರ, ಚೇತನ್ ನಗರ ಅಂಗಡಿಪದವು ಇವರ ನೇತೃತ್ವದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ. ಕೆಎಂಸಿ ಆಸ್ಪತ್ರೆ ಮಂಗಳೂರು ಇವರ ಸಹಕಾರದೊಂದಿಗೆ ಈ ಶಿಬಿರ ನಡೆಯಲಿದೆ.

ಮಾರ್ಚ್ 22ರಂದು ಆದಿತ್ಯವಾರ ಬೆಳಗ್ಗೆ 10.00 ಗಂಟೆಗೆ ನಡೆಯಲಿರುವ ಈ ಶಿಬಿರವು ದಿ. ಪ್ರಜ್ವಲ್ ಅವರ ದ್ವಿತೀಯ ವರ್ಷದ ಸ್ಮರಣಾರ್ಥವಾಗಿ ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಶಿಬಿರವು ಆದಿಶಕ್ತಿ ತರವಾಡು ಕ್ಷೇತ್ರ, ಚೇತನ್ ನಗರ, ಅಂಗಡಿಪದವು ಪ್ರದೇಶದಲ್ಲಿ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನ ಮಾಡುವಂತೆ ಮನವಿ ಮಾಡಲಾಗಿದೆ.

ರಕ್ತದಾನದ ಮೂಲಕ ಜೀವ ಉಳಿಸುವ ಮಹತ್ವದ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಲಾಗಿದ್ದು, ತುರ್ತು ಸಂದರ್ಭಗಳಲ್ಲಿ ಅಗತ್ಯವಿರುವ ರಕ್ತದ ಸಂಗ್ರಹವನ್ನು ಹೆಚ್ಚಿಸುವುದೇ ಈ ಶಿಬಿರದ ಮುಖ್ಯ ಉದ್ದೇಶವಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!