ಮಂಜೇಶ್ವರದ ಚುನಾವಣಾ ಗೆಲುವಿಗಾಗಿ ಆಯೋಜಿಸಲಾದ ಪಂಚಾಯತ್ ಸಮಾವೇಶಗಳು ಪೂರ್ಣಗೊಂಡಿವೆ. ಯುಡಿಎಫ್ ಅಭ್ಯರ್ಥಿ ಎಕೆಎಂ ಅಶ್ರಫ್ ಅವರ ಚುನಾವಣೆಯ ಗೆಲುವಿಗಾಗಿ ಆಯೋಜಿಸಲಾದ ಪಂಚಾಯತ್ ಸಮಾವೇಶಗಳು ಪೂರ್ಣಗೊಂಡಿವೆ.ಇದರೊಂದಿಗೆ, ಪ್ರಚಾರವು ಎರಡನೇ ಹಂತವನ್ನು ತಲುಪಿದೆ.
ಮಂಜೇಶ್ವರ ಪಂಚಾಯತ್ ಸಮಾವೇಶವನ್ನು ಕರ್ನಾಟಕ ಗೇರು ನಿಗಮದ ಅಧ್ಯಕ್ಷರಾದ ಶ್ರೀಮತಿ ಮಮತಾ ಗಟ್ಟಿ ಉದ್ಘಾಟಿಸಿದರು.ಯುಡಿಎಫ್ ಪಂಚಾಯತ್ ಅಧ್ಯಕ್ಷ ಹಝಿಜ್ ಹಾಜಿ ಅಧ್ಯಕ್ಷತೆ ವಹಿಸಿದ್ದರು.ಸಂಚಾಲಕ ಹನೀಫ್ ಪಡಿ0ಜಾರ್ ಸ್ವಾಗತಿಸಿದರು.
ಮಂಜುನಾಥ ಆಳ್ವ, ಹಝಿಜ್ ಮೇರಿಕೆ, ಸೋಮ ಶೇಖರ್, ಡಿಎಂಕೆ ಮುಹಮ್ಮದ್, ಲಕ್ಷ್ಮಣ್ ಪ್ರಭು, ಟಿ.ಎ. ಮೂಸಾ, ಎಂ.ಅಬ್ಬಾಸ್, ಎ.ಕೆ.ಆರಿಫ್, ಸೈಫುಲ್ಲಾ ತಂಗಳ್, ಅಬ್ದುಲ್ಲಾ ಬಾವ ಹಾಜಿ, ಅಬ್ದುಲ್ ಹಮೀದ್ ಮಚ್ಚಂಬಾಡಿ, ಹರ್ಷಾದ್ ವರ್ಕಾಡಿ , ಇರ್ಫಾನಾ ಇಕ್ಬಾಲ್, ಮುಮ್ತಾಝ್ ಸೇಮಿರ, ಬಶೀರ್ ಕನಿಲ, ಎ.ಮುಖ್ತಾರ್, ಪ್ರಶಾಂತಿ, ಫ್ರಾನ್ಸಿಸ್ ಮೊಂತೆರೋ, ಓಂ ಕೃಷ್ಣ, ಕೃಷ್ಣ ಅಟ್ಕತ್ತೊಟ್ಟಿ ಮಾತನಾಡಿದರು.