ಉಡುಪಿ: ಯಕ್ಷಗಾನ ಪ್ರದರ್ಶನದ ನಡುವೆ ಪ್ರೇಕ್ಷಕರಿಗೆ ತರಾಟೆ — ಕಲಾವಿದರ ನಡೆ ಕುರಿತು ಚರ್ಚೆ

ಉಡುಪಿ: ಕುಂದಾಪುರ ತಾಲೂಕಿನ ಹೆನ್ನಾಬೈಲಿನಲ್ಲಿ ನಡೆಯುತ್ತಿದ್ದ ಧರ್ಮಸ್ಥಳ ಮೇಳದ ಯಕ್ಷಗಾನ ಪ್ರದರ್ಶನದ ವೇಳೆ ಹಿರಿಯ ಯಕ್ಷಗಾನ ಕಲಾವಿದ ಅಶೋಕ್ ಭಟ್ ಉಜಿರೆ ಪ್ರೇಕ್ಷಕರ ವರ್ತನೆಗೆ ಕಿಡಿ ಕಾರಿದ ಘಟನೆ ಯಕ್ಷಗಾನ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಯಕ್ಷಗಾನದ ಭಾಗವತಿಕೆ ನಡೆಯುತ್ತಿದ್ದ ವೇಳೆ ಒಬ್ಬ ಪ್ರೇಕ್ಷಕ ಶಿಳ್ಳೆ ಹಾಕಿದ ಹಿನ್ನೆಲೆ ಕಲಾವಿದ ಅಶೋಕ್ ಭಟ್ ಉಜಿರೆ ವೇಷಧಾರಿಯಲ್ಲಿಯೇ ಪ್ರೇಕ್ಷಕರಿಗೆ ಕ್ಲಾಸ್ ತೆಗೆದುಕೊಂಡರು. ಯಕ್ಷಗಾನ ಪ್ರದರ್ಶನ ವೇಳೆ ಸೌಜನ್ಯ ಮೀರಬಾರದು ಎಂದು ಎಚ್ಚರಿಕೆ ನೀಡಿದ ಅವರು, “ನಿಮ್ಮಂಥ ಪ್ರೇಕ್ಷಕರ ಅಗತ್ಯ ಇಲ್ಲ” ಎಂದು ಗರಂ ಆಗಿರುವುದು ವಿಡಿಯೋದಲ್ಲಿ ಕಾಣಿಸಿಕೊಂಡಿದೆ.

ಈ ಘಟನೆ ಬಳಿಕ ಕಲಾವಿದರ ನಡೆ ಕುರಿತು ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಕೆಲವರು ಯಕ್ಷಗಾನದ ಗೌರವ ಕಾಪಾಡಲು ಕಲಾವಿದರು ನೀಡಿದ ಎಚ್ಚರಿಕೆ ಸರಿಯೇ ಎಂದು ಅಭಿಪ್ರಾಯಪಟ್ಟರೆ, ಇನ್ನೂ ಕೆಲವರು ಪಾತ್ರಧಾರಿಯಾಗಿ ವೇದಿಕೆಯಲ್ಲೇ ಪ್ರೇಕ್ಷಕರಿಗೆ ತರಾಟೆ ತೆಗೆದುಕೊಳ್ಳುವುದು ಸರಿಯಲ್ಲ ಎಂದು ಟೀಕಿಸಿದ್ದಾರೆ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಯಕ್ಷಗಾನ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!