ಅಡುಗೆ ಅನಿಲ ಕ್ಷಾಮ ವಿರುದ್ಧ ಹೊಸಂಗಡಿಯಲ್ಲಿ ಸಿಪಿಐಎಂ ನೇತೃತ್ವದಲ್ಲಿ ಪ್ರತಿಭಟನೆ

ಕೇಂದ್ರ ಸರ್ಕಾರದ ಎಡಬಿಡಂಗಿ ನಿರ್ಧಾರದ ಭಾಗವಾಗಿ ದೇಶದಲ್ಲಿ ಅಡುಗೆ ಅನಿಲ ಕ್ಷಾಮ ಉಂಟಾಗಿದೆ. ಕೇಂದ್ರ ಸರ್ಕಾರ ಅಮೆರಿಕಾ ಅಧ್ಯಕ್ಷರ ಬೆದರಿಕೆಗೆ ಬಗ್ಗಿ ರಷ್ಯಾ ದಿಂದ ಸಿಗುತ್ತಿದ್ದ ಕಚ್ಚಾ ಕ್ರೂಡ್ ಆಯಿಲ್ ಖರೀದಿಸದೆ ಇರುವುದರಿಂದ ಅಡುಗೆ ಅನಿಲ ಕ್ಷಾಮ ಉಂಟಾಗಿದ್ದು ನಗರ, ಗ್ರಾಮ ಪ್ರದೇಶದ ಜನತೆ ಸಂಕಷ್ಟಕ್ಕೆ ಒಳಗಾಗಿದ್ದು ಹಲವಾರು ಜನರು ಹೋಟೆಲ್ ಮುಚ್ಚಿದರಿಂದ ಆಹಾರ ಸಿಗದೆ ಪರದಾಡುವ ಪರಿಸ್ತಿತಿ ಬಂದಿದೆ.

ಇದಕ್ಕೆದುರಾಗಿ ಜನತೆ ಬೀದಿಗಿಳಿದು ಪ್ರತಿಭಟಿಸಬೇಕೆಂದು ಸಿಪಿಐಎಂ ಕಾಸರಗೋಡು ಜಿಲ್ಲಾ ಸಮಿತಿ ಸದಸ್ಯೆ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಕರೆನೀಡಿ ಹೊಸಂಗಡಿಯಲ್ಲಿ ನಡೆದ ಪ್ರತಿಭಟನೆ ಉದ್ಘಾಟಿಸಿ ಮಾತನಾಡಿದರು. ಅಡುಗೆ ಅನಿಲ ಕ್ಷಾಮ ದ ವಿರುದ್ಧ ಒಲೆ ಉರಿಸಿ ಚಾ ತಯಾರಿಸಿ ಪ್ರತಿಭಟನೆ ನಡೆಸಲಾಯಿತು. ಸಿಪಿಐ ನೇತಾರ ರಾಮಚಂದ್ರ ಬಡಾಜೆ ಅಧ್ಯಕ್ಷತೆ ವಹಿಸಿದ್ದರು ಕರುಣಾಕರ ಶೆಟ್ಟಿ ಪ್ರಣವ್ ,ಶರತ್, ಕಮಲಾಕ್ಷ ಕನಿಲ ಮೊದಲಾದವರು ಉಪಸ್ಥಿತರಿದ್ದರು ಪ್ರಶಾಂತ್ ಕನಿಲ ಸ್ವಾಗತಿಸಿದರು

SHARE
Loading spinner

Leave a Reply

Your email address will not be published. Required fields are marked *

error: Content is protected !!