ಮಂಜೇಶ್ವರಂ. ಕೇರಳದಲ್ಲಿ ವರ್ಗೀಯ ವಿಭಜನೆ ರಾಜಕೀಯಕ್ಕೂ ಹಾಗೂ ಎಡಪಂಥೀಯ ದುರಾಡಳಿತಕ್ಕೂ ಈ ಚುನಾವಣೆಯೊಂದಿಗೆ ಅಂತ್ಯಕಾಲ ಸಮೀಪಿಸಿದೆ ದ್ವೇಷ ಹರಡುವ ಮೂಲಕ ಯಾವಾಗಲೂ ಮತಗಳನ್ನುಗಳಿಸಬಹುದು ಎಂಬ ಬಿಜೆಪಿಯ ಭ್ರಮೆ ಮುಗಿದಿದೆ ಎಂದು ಮುಸ್ಲಿಂ ಲೀಗ್ ರಾಜ್ಯ ಕಾರ್ಯದರ್ಶಿ ಪಿ. ಎಂ. ಎ ಸಲಾಂ ಹೇಳಿದರು.
ಮಂಜೇಶ್ವರ ಕ್ಷೇತ್ರದ ಯುಡಿಎಫ್ ಅಭ್ಯರ್ಥಿ ಎ .ಕೆ .ಎಂ . ಅಶ್ರಫ್ ಅವರ ಚುನಾವಣಾ ಪ್ರಚಾರದ ಅಂಗವಾಗಿ ಮೀಂಜ ಪಂಚಾಯತ್‌ನ ಗಾಂಧಿನಗರದಲ್ಲಿ ನಡೆದ ಕುಟುಂಬ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ದ್ವೇಷವನ್ನು ಪ್ರಚೋದಿಸಿ ಯಾವತ್ತೂ ಮತಗಳನ್ನು ಪಡೆಯಬಹುದು ಎಂಬ Bharatiya Janata Party (ಬಿಜೆಪಿ)ಯ ಭ್ರಮೆಯ ಕಾಲ ಕಳೆದಿದೆ ಎಂದರು.
ಇನ್ನೂ, ಶಾಂತಿಯ ಶತ್ರುಗಳಾದ ಬಿಜೆಪಿ ಮತ್ತು ಕಳೆದ ಹತ್ತು ವರ್ಷಗಳ ಎಡಪಂಥೀಯ ದುರಾಡಳಿತಕ್ಕೆ ವಿರುದ್ಧವಾಗಿ ಕೇರಳದ ಜನತೆ ಈ ಚುನಾವಣೆಯಲ್ಲಿ ಬಲವಾದ ಪ್ರತಿಕ್ರಿಯೆ ನೀಡಲಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದಾಮೋದರನ್ ಮಾಸ್ಟರ್ ಅಧ್ಯಕ್ಷತೆ ವಹಿಸಿದ್ದರು. ಬಿ.ಕೆ. ಮೊಹಮ್ಮದ್ ಸ್ವಾಗತಿಸಿದರು. ಅಭ್ಯರ್ಥಿ ಎ.ಕೆ.ಎಂ. ಅಶ್ರಫ್, ಮುಸ್ಲಿಂ ಲೀಗ್ ರಾಜ್ಯ ಕೋಶಾಧಿಕಾರಿ ಸಿ.ಟಿ. ಅಹಮದಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ. ಅಬ್ದುಲ್ ರಹಿಮಾನ್,ಕೋಶಾಧಿಕಾರಿ ಪಿ.ಎಂ. ಮುನೀರ್ ಹಾಜಿ, ಯುಡಿಎಫ್ ಮಂಡಲ ಅಧ್ಯಕ್ಷ ಅಜೀಸ್ ಮೆರಿಕ್ಕೆ, ಪ್ರಧಾನ ಸಂಚಾಲಕ ಮಂಜುನಾಥ ಆಳ್ವ , ಎಂ . ಅಬ್ಬಾಸ್ , ಎ. ಕೆ. ಆರಿಫ್ , ಹರ್ಷದ್ ವೊರ್ಕಾಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.