ಮಂಗಳೂರು: ನಗರದ ಕರಂಗಲ್ಪಾಡಿಯ ಕಾರ್ಣಿಕದ ಶ್ರೀ ಮಹಾಸತಿ ಹಾಗೂ ಶ್ರೀ ಭಗವತಿ ಅಮ್ಮನವರ ಸಾನಿಧ್ಯದಲ್ಲಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಮುಲ್ಕಿ ಇವರಿಂದ ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟ ಏಪ್ರಿಲ್ 4 ಶನಿವಾರ ರಾತ್ರಿ ೮. ೩೦ ರಿಂದ ನಡೆಯಲಿದೆ ಎಂದು ಕರಂಗಲ್ಪಾಡಿಯ ಶ್ರೀ ಮಹಾಸತಿ ಹಾಗೂ ಶ್ರೀ ಭಗವತಿ ಅಮ್ಮನವರ ಸಾನಿಧ್ಯದ ಪ್ರಧಾನ ಅರ್ಚಕರಾದ ಸುದನ್ ವಿದ್ಯಾನಗರ ಪಂಜಿಮುಗೇರು ತಿಳಿಸಿದರು .
ಅವರು ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಶ್ರೀ ಭಗವತಿ ಅಮ್ಮನವರ ಸಾನಿಧ್ಯದಲ್ಲಿ ಬೆಳಗ್ಗೆ 5 ಗಂಟೆಗೆ ಶ್ರೀ ಕೃಷ್ಣ ಅಡಿಗ ನೇತೃತ್ವದಲ್ಲಿ ಗಣಹೋಮ ನಂತರ ಸಾಮೂಹಿಕ ಪ್ರಾರ್ಥನೆ, ಮಧ್ಯಾಹ್ನ 12:30ಕ್ಕೆ ಅಮ್ಮನವರಿಗೆ ಸಾಮೂಹಿಕ ಪೂಜೆ ಹಾಗೂ ಪ್ರಾರ್ಥನೆ ನಡೆಯಲಿದೆ ಎಂದರು .
ಸಂಜೆ 4:00 ಗಂಟೆಗೆ ಕದ್ರಿ ಮಂಜುನಾಥ ದೇವಸ್ಥಾನದಿಂದ ನೂತನ ರಜತ ಕವಚ, ಪ್ರಭಾವಳಿ, ನಂದಾ ದೀಪ ಮೆರವಣಿಗೆ ಮೂಲಕ ಅಮ್ಮನವರ ಸಾನಿಧ್ಯಕ್ಕೆ ತಂದು ಒಪ್ಪಿಸಲಾಗುವುದು. ಸಂಜೆ 6:30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ . ರಾತ್ರಿ 8 ಗಂಟೆಗೆ ಶ್ರೀ ಕ್ಷೇತ್ರ ಬಪ್ಪನಾಡು ದುರ್ಗಾಪರಮೇಶ್ವರಿ ಅಮ್ಮನವರಿಗೆ ಚೌಕಿ ಪೂಜೆಯ ಬಳಿಕ ಅನ್ನಪ್ರಸಾದ ವಿತರಣೆ, ಸಾನಿಧ್ಯದ ಬಳಿ ಹಾಕಿರುವ ರಂಗಸ್ಥಳದಲ್ಲಿ ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ ಎಂದರು .
ಪತ್ರಿಕಾಗೋಷ್ಠಿಯಲ್ಲಿ ಕರಂಗಲ್ಪಾಡಿಯ ಶ್ರೀ ಮಹಾಸತಿ ಹಾಗೂ ಶ್ರೀ ಭಗವತಿ ಅಮ್ಮನವರ ಭಕ್ತವೃಂದದ ಪ್ರಮುಖರಾದ ನವೀನ್ ಬಿಜೈ, ಗಿರೀಶ್ , ಸತ್ಯ ಪ್ರಸಾದ್ ಪೊಳಲಿ, ರಜನೀಶ್ ಬಿಜೈ , ಚೇತನ್ ಜಪ್ಪಿನಮುಗೇರು, ರವಿಚಂದ್ರ ಶೆಟ್ಟಿ ಅಶೋಕ್ ನಗರ ಉಪಸ್ಥಿತರಿದ್ದರು .