ಮಂಜೇಶ್ವರ ಕೃಷಿಭವನ ಹಾಗೂ ಕಾಸರಗೋಡು ಸಿಪಿಸಿಆರ್ಐ (CPCRI)ಯ ಸಂಯುಕ್ತಾಶ್ರಯದಲ್ಲಿ ‘ವಿಕಸಿತ್ ಕೃಷಿ ಸಂಕಲ್ಪ ಅಭಿಯಾನ್’ ಎಂಬ ಹೆಸರಿನಲ್ಲಿ ಕಾರ್ಷಿಕ ಸೆಮಿನಾರ್ ನಡೆಯಿತು.
ಈ ಕಾರ್ಯಕ್ರಮವು ಮಂಜೇಶ್ವರ ಬ್ಲಾಕ್ ಕಚೇರಿಯಲ್ಲಿ ನಡೆಯಿತು. ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜೀನ್ ಲವೆನಾ ಮೊಂತೇರೋ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಂಜೇಶ್ವರ ಕೃಷಿ ಸಹಾಯಕ ನಿರ್ದೇಶಕಿ ಶ್ರೀಮತಿ ಸುಜಿತಾ ಪಿ ಎಸ್ ಮತ್ತು ಕೃಷಿ ಅಧಿಕಾರಿಯಾದ ಶ್ರೀ ಶ್ರೀನಾಥ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾಡಿದರು.
ಕಾರ್ಯಕ್ರಮದಲ್ಲಿ ಕಾಸರಗೋಡು ಸಿಪಿಸಿಆರ್ಐನ ವಿಜ್ಞಾನಿಗಳು ಶ್ರೀಮತಿ ಸರಿತಾ, ಶ್ರೀಮತಿ ಸುರೇಖಾ, ಶ್ರೀ ದಿನೇಶ್ ಹಾಗೂ ಕೋಝಿಕೋಡ್ ಸುಗಂಧವೃಕ್ಷ ಸಂಶೋಧನಾ ಕೇಂದ್ರದ ವಿಜ್ಞಾನಿ ಶ್ರೀ ಸಜೀಷ್ ಅವರು ಕೃಷಿ ವಿಷಯಗಳಲ್ಲಿ ಮಾಹಿತಿ ನೀಡಿ ಸೆಮಿನಾರ್ನ್ನು ಮುನ್ನಡೆಸಿದರು