ಗ್ಯಾಸ್ ಅಭಾವದಿಂದ ಪುತ್ತೂರಿನಲ್ಲಿ ಆಟೋ ಸಂಚಾರ ಅಸ್ತವ್ಯಸ್ತ

ಪುತ್ತೂರು: ನಗರದಲ್ಲಿ ತಲೆದೋರಿರುವ ಗ್ಯಾಸ್‌ ಕೊರತೆ ಇದೀಗ ಆಟೋ ರಿಕ್ಷಾ ಚಾಲಕರಿಗೂ ತೀವ್ರ ಸಂಕಷ್ಟ ಉಂಟುಮಾಡಿದೆ. ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದಲೇ ಪುತ್ತೂರಿನ ಬೋಲ್ವಾರ್, ಸಂಪ್ಯ ಪ್ರದೇಶದ ಗ್ಯಾಸ್ ಪಂಪ್, ಮುಕ್ರಂಪಾಡಿ ಬಳಿ ಆಟೋಗಳು ಕಿಲೋಮೀಟರ್‌ಗಳಷ್ಟು ಉದ್ದದ ಸಾಲಿನಲ್ಲಿ ನಿಂತು ಕಾಣಿಸಿಕೊಂಡವು.

ಗ್ಯಾಸ್‌ ತುಂಬಿಸಿಕೊಳ್ಳಲು ಚಾಲಕರು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ದಿನನಿತ್ಯದ ಉದ್ಯೋಗಕ್ಕೆ ಇದರಿಂದ ದೊಡ್ಡ ಹೊಡೆತ ಬಿದ್ದಿದೆ.ಬೆಳಿಗ್ಗೆಯಿಂದಲೇ ಪಂಪ್ ಮುಂದೆ ವಾಹನಗಳ ದಟ್ಟಣೆ ಹೆಚ್ಚಾಗಿ, ಸಂಚಾರಕ್ಕೂ ಅಡಚಣೆ ಉಂಟಾದ ದೃಶ್ಯ ಕಂಡುಬಂದಿತು.ಗ್ಯಾಸ್‌ ಕೊರತೆಯಿಂದಾಗಿ ಪ್ರಯಾಣಿಕರಿಗೆ ಸೇವೆ ನೀಡಲು ವಿಳಂಬವಾಗುತ್ತಿರುವುದಾಗಿ ಚಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!