ಮಂಜೇಶ್ವರ: ಪಾವೂರು ನಾಗ ಬ್ರಹ್ಮಾ ವನದುರ್ಗ ಸಾಸ್ತಾರ ಕ್ಷೇತ್ರದಲ್ಲಿ ವಾರ್ಷಿಕೋತ್ಸವದ ಅಂಗವಾಗಿ ಅಶ್ಲೇಷ ಪೂಜೆ ಹಾಗೂ ನಾಗ ತಂಬಿಲ ಭಕ್ತಿಭಾವದಿಂದ ನೆರವೇರಿತು.
ಕುಂಟ್ಟರೂ ರವೀಶ್ ತಂತ್ರಿಗಳ ಆಶೀರ್ವಾದದೊಂದಿಗೆ ತಲಪಾಡಿ ದುರ್ಗಾ ಪರಮೇಶ್ವರಿ ಕ್ಷೇತ್ರದ ಗಣೇಶ್ ಭಟ್ ಅವರ ನೇತೃತ್ವದಲ್ಲಿ ಪೂಜೆ ಮತ್ತು ವಿಧಿವಿಧಾನಗಳು ನಡೆದವು.
ಕಾರ್ಯಕ್ರಮದಲ್ಲಿ ಕ್ಷೇತ್ರದ ಅಧ್ಯಕ್ಷ ಕೃಷ್ಣ ಶಿವಕೃಪಾ ಕುಂಜತೂರ್, ಉಪಾಧ್ಯಕ್ಷ ಗಣೇಶ್ ಪಾವೂರು, ಕಾರ್ಯದರ್ಶಿ ಕಮಲಾಕ್ಷ ವಕೀಲರು (ಮಂಗಳೂರು), ಖಜಾಂಚಿ ಕೋಟಿಯಪ್ಪ ಪೂಜಾರಿ ಸೇರಿದಂತೆ ದಯಾನಂದ ಪಾವೂರು, ಸರ್ಮಿಳಾ ಮಂಗಳೂರು, ಸದಾಶಿವ ಕುಂಜತೂರ್, ಉಮೇಶ್ ಕೊಪ್ಪಳ, ನಾರಾಯಣ ಕೊಪ್ಪಳ, ಜಯಪ್ರಕಾಶ್ ಕೊಪ್ಪಳ ಮತ್ತು ಇತರರು ಭಾಗವಹಿಸಿದರು.
ಧಾರ್ಮಿಕ ಆಚರಣೆಗಳು ಸಾಂಪ್ರದಾಯಿಕವಾಗಿ ನಡೆಯಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.