ಮಂಗಳೂರು: ಸಾರಿಗೆ ಕ್ಷೇತ್ರದ ಕಾರ್ಮಿಕರು ಮತ್ತು ಮಾಲೀಕರಿಗಾಗಿ ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ವತಿಯಿಂದ ಏಪ್ರಿಲ್ 9 ರಂದು ಮಂಗಳೂರಿನ ಅಡ್ಯಾರ್ ಗಾರ್ಡನ್ನಲ್ಲಿ “ಶ್ರೀರಾಮ್ ಸಾರಥಿ ಸಂಗಮ” ಎಂಬ ಕಾರ್ಯಕ್ರಮ ನಡೆಯಲಿದೆ ಎಂದು ಸಂಸ್ಥೆಯ ಮಂಗಳೂರು ವಲಯದ ಅಧ್ಯಕ್ಷ ಶರಶ್ಚಂದ್ರ ಭಟ್ ಕಾಕುಂಜೆ ತಿಳಿಸಿದರು .
ಅವರು ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಕಾರ್ಯಕ್ರಮದಲ್ಲಿ ಪ್ರಮುಖ ಬ್ಯಾಂಡ್ ಗಳ ಹೊಸ ವಾಹನಗಳು ಮತ್ತು ಯಂತ್ರಗಳ ಪ್ರದರ್ಶನ ನಡೆಯಲಿದ್ದು, ಅಂದು ಬುಕ್ಕಿಂಗ್ ಮಾಡುವ ವಾಹನಗಳ ಮೇಲೆ ವಿಶೇಷ ರಿಯಾಯಿತಿ ಇದೆ ಎಂದರು .
ಕಂಪೆನಿಯ ವತಿಯಿಂದ ಸರ್ವಿಸ್ ಚಾರ್ಜ್ ಮೇಲೆ ಶೇ.50 ರಿಯಾಯಿತಿ ಹಾಗೂ ಬಡ್ಡಿ ದರದಲ್ಲೂ ವಿಶೇಷ ಸಡಿಲಿಕೆ ದೊರೆಯಲಿದೆ. ಆರೋಗ್ಯ ತಪಾಸಣೆ ಉಚಿತ ಶಿಬಿರ, ರಕ್ತದಾನ ಶಿಬಿರ, ಕಣ್ಣು ಮತ್ತು ಕಿವಿ ಪರೀಕ್ಷೆ ಹಾಗೂ ಸಾರಿಗೆ ಉದ್ಯಮ ಕ್ಷೇತ್ರಕ್ಕೆ ಸಂಬಂಧಪಟ್ಟ ಕಾರ್ಮಿಕರ ಮತ್ತು ಮಾಲಕರ 8ನೇ ತರಗತಿಯಿಂದ 12ನೇ ತರಗತಿವರೆಗೆ ಶೇ.60ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಯೋಜನೆಗಳ ಕುರಿತು ಮಾಹಿತಿ ಮತ್ತು ಅರ್ಜಿ ವಿತರಣೆಯೂ ನಡೆಯಲಿದೆ ಎಂದು ತಿಳಿಸಿದರು .
ಕಾರ್ಯಕ್ರಮಕ್ಕೆ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್, ಸಂಸದ ಕ್ಯಾಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್, ವಿ.ಪರಿಷತ್ ಸದಸ್ಯ ಐವನ್ ಡಿಸೋಜ, ಶ್ರೀರಾಮ್ ಫೈನಾನ್ಸ್ ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಉಮೇಶ್ ಜಿ. ರೇವಣ್ಮರ್, ಜೆಸಿಬಿ ಇಂಡಿಯಾ ಸಿಇಒ ಮತ್ತು ಎಂ.ಡಿ. ದೀಪಕ್ ಶೆಟ್ಟಿ, ಶ್ರೀರಾಮ್ ಫೈನಾನ್ಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುದರ್ಶನ ಹೊಳ್ಳ ಬಾಲ್ನಾಡ್, ಮುಖ್ಯ ಮಾರಾಟ ಅಧಿಕಾರಿ ನಿಲೇಶ್ ಒಡೆದಾರ, ಕಾರ್ಯನಿರ್ವಾಹಕ ನಿರ್ದೇಶಕ ಶ್ರೀಧರ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು .
ಸಾರಿಗೆ ಕ್ಷೇತ್ರದ ಚಾಲಕರು, ವಾಹನ ಮಾಲಕರು, ಕಾರ್ಮಿಕರು ಹಾಗೂ ಅವರ ಕುಟುಂಬ ಸದಸ್ಯರಿಗಾಗಿ ಈ ಕಾರ್ಯಕ್ರಮವನ್ನು ವಿಶೇಷವಾಗಿ ಆಯೋಜಿಸಲಾಗಿದೆ. ದ.ಕ. ಜಿಲ್ಲೆಯಲ್ಲಿ ಸಂಸ್ಥೆಯು 10 ಶಾಖೆಗಳೊಂದಿಗೆ ಕಾರ್ಯ ನಿರ್ವಹಿಸುತ್ತಿದೆ ಎಂದು ಅವರು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಅಧಿಕಾರಿಗಳಾದ ಅಧಿಕಾರಿಗಳಾದ ನಾಗರಾಜ್, ಚೇತನ್ ಅರಸ್, ಸಚಿನ್ ಉಪಸ್ಥಿತರಿದ್ದರು.