ಅಶೋಕನಗರದಲ್ಲಿ ಮಹಿಳಾ ಮಂಡಲ–ಅಂಗನವಾಡಿಗೆ ಇಂಟರ್‌ಲಾಕ್ ಅಳವಡಿಕೆ: ಶಾಸಕ ವೇದವ್ಯಾಸ ಕಾಮತ್ ಉದ್ಘಾಟನೆ

ಮಂಗಳೂರು:
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 25ನೇ ವಾರ್ಡಿನ ಅಶೋಕನಗರದಲ್ಲಿರುವ ಮಹಿಳಾ ಮಂಡಲ ಹಾಗೂ ಅಂಗನವಾಡಿ ಶಾಲೆಗೆ ಇಂಟರ್‌ಲಾಕ್ ಅಳವಡಿಸಲಾಗಿದ್ದು, ಶಾಸಕ Vedavyas Kamath ಅವರು ಉದ್ಘಾಟನಾ ಸಮಾರಂಭವನ್ನು ನೆರವೇರಿಸಿದರು.

ಉದ್ಘಾಟನೆಯ ಬಳಿಕ ಮಾತನಾಡಿದ ಶಾಸಕರು, ಸ್ಥಳೀಯರ ಮನವಿಯಂತೆ ಅನುದಾನವನ್ನು ವ್ಯವಸ್ಥೆ ಮಾಡಿ ಕಾಮಗಾರಿ ಪೂರ್ಣಗೊಳಿಸಲಾಗಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿಯೂ ಅಗತ್ಯ ಬಿದ್ದರೆ ಇನ್ನಷ್ಟು ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ನಿಕಟಪೂರ್ವ ಮನಪಾ ಸದಸ್ಯೆ ಜಯಲಕ್ಷ್ಮೀ ವಿ. ಶೆಟ್ಟಿ, ಬಿಜೆಪಿ ಪ್ರಮುಖರಾದ ದೀಕ್ಷಿತ್, ವರದರಾಜ್, ಲೋಕೇಶ್, ಸೌಮ್ಯ, ಸುಪ್ರಿತಾ, ಮಂಜುಳಾ ರೈ, ಚಂದ್ರಪ್ರಭಾ ರಾವ್ ಸೇರಿದಂತೆ ಮಹಿಳಾ ಮೋರ್ಚಾ ಪ್ರಮುಖರು, ಕಾರ್ಯಕರ್ತರು, ಅಧಿಕಾರಿಗಳಾದ ಶ್ವೇತಾ ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!