ಆನೆಕಲ್ಲು: ಎಸ್. ಎಸ್. ಕೆ ಕಾಸರಗೋಡು ಹಾಗೂ ಬಿ. ಆರ್. ಸಿ ಮಂಜೇಶ್ವರ ಆಶ್ರಯದಲ್ಲಿ ಮೂರು ದಿನಗಳ ವೈವಿಧ್ಯ ಬೇಸಿಗೆ ಶಿಬಿರವು ಆನೆಕಲ್ಲು ಶಾಲೆಯಲ್ಲಿ ಜರಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯರಾದ ಹರ್ಷಾದ್ ವರ್ಕಾಡಿ ನೆರವೇರಿಸಿದರು.
ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಅಶೋಕ್ ಕೊಡ್ಲಮೊಗರು ರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ, ಶಾಲಾ ಮುಖ್ಯೋಪಾಧ್ಯಯರಾದ ರವಿಶಂಕರ್ , ಸಿತಾರ ಟೀಚರ್ ಶುಭ ಹಾರೈಸಿದರು. ಬಿ .ಪಿ. ಸಿ ರಾಜ ಗೋಪಾಲನ್ ಕಾರ್ಯಕ್ರಮದ ಉದ್ದೇಶವನ್ನು ತಿಳಿಸಿದರು. ಬಿ.ಆರ್.ಸಿ ಟ್ರೈನರ್ ಸುಮ್ಮಯ್ಯ ಟೀಚರ್ ಸ್ವಾಗತಿಸಿ ಸಿ ಆರ್ ಸಿ ಕೊರ್ಡಿನೇಟರ್ ಚಂದ್ರಿಕಾ ಟೀಚರ್ ವಂದಿಸಿದರು.ತಿಲಕ ಟೀಚರ್ ಕಾರ್ಯಕ್ರಮ ನಿರೂಪಿಸಿದರು.ತದನಂತರ ವಿವಿಧ ವೈವಿಧ್ಯ ಚಟುವಟಿಕೆಗಳು ಜರುಗಿದವು.ಮೊದಲ ದಿನದ ಸಂಪನ್ಮೂಲ ವ್ಯಕ್ತಿಗಳಾಗಿ ಪದ್ಮಸರೋಜ ಟೀಚರ್,ರಾಜೇಶ್ವರಿ ಟೀಚರ್,ರಶ್ಮಿ ಟೀಚರ್ ವಿವಿಧ ಚಟುವಟಿಕೆಗಳ ನೇತೃತ್ವ ವಹಿಸಿದರು. ಶೈಲಜಾ ಟೀಚರ್, ಶ್ಯಾಮಲ ಟೀಚರ್,ಚೈತ್ರ ಟೀಚರ್ ಸಹಕರಿಸಿದರು.