ಬಂಟ್ವಾಳ:ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಚರಂಡಿಗೆ ಬಿದ್ದ ಘಟನೆ ಮೇ.5 ರಂದು ಮಂಗಳವಾರ ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿ ಬಿಸಿರೋಡು ವಿಲ್ಲಾಪುರ ರಸ್ತೆಯ ಬಂಟ್ವಾಳ ಸಮೀಪದ ಪೊಯ್ಲೊಡಿ ಎಂಬಲ್ಲಿ ನಡೆದಿದೆ.
ಘಟನೆಯಿಂದ ಚಿಕ್ಕಮಂಗಳೂರು ನಿವಾಸಿ ಲಕ್ಷಣ್ ಗೌಡ ಅವರು ಅಲ್ಪಸ್ವಲ್ಪ ಗಾಯಗಳಿಂದ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.
ಲಕ್ಷಣ್ ಗೌಡ ಅವರು ಚಿಕ್ಕಮಗಳೂರಿನಿಂದ ಮಂಗಳೂರು ಕಡೆಗೆ ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಪೋಲೀಸರು ತಿಳಿಸಿದ್ದಾರೆ.