ಮೇ 10ರಂದು ಕೃಷ್ಣ ಮಂತ್ರ ಲೇಖನಯಜ್ಞ ಲೋಕಾರ್ಪಣೆ

ಉಡುಪಿ: ಕಲಿಯುಗದಲ್ಲಿ ಕೃಷ್ಣ ಮಂತ್ರ ಜಪ ಹೆಚ್ಚು ಲದಾಯಕ. ಹೀಗಾಗಿ ಶ್ರೀಕೃಷ್ಣ ಮಠದಲ್ಲಿ ಕೃಷ್ಣಮಂತ್ರ ಜಪ-ಲೇಖನ ಯಜ್ಞ ಆರಂಭಿಸಲಾಗಿದ್ದು, ಮೇ 10ರಂದು ಕೃಷ್ಣ ಮಂತ್ರ ಲೇಖನಯಜ್ಞ ಲೋಕಾರ್ಪಣೆಗೊಳ್ಳಲಿದೆ ಎಂದು ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನ ಶ್ರೀಪಾದರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬರೆದಾದ ಮೇಲೆ ಪುಸ್ತಕವನ್ನು ನಿಗದಿತ ದಿನದಂದು ಮಠಕ್ಕೆ ಬಂದು ಕೃಷ್ಣನಿಗೆ ಅರ್ಪಿಸಬಹುದು ಎಂದರು.


ದಿವಾನ್​ ಡಾ. ಉದಯ್​ ಸರಳತ್ತಾಯ ಮಾತನಾಡಿ, ಮೇ 10ರಂದು ಸಂಜೆ 5.30ಕ್ಕೆ ಕೃಷ್ಣ ಮಂತ್ರ ಜಪ ಲೇಖನ ಯಜ್ಞಕ್ಕೆ ಸಂಬಂಧಪಟ್ಟ ಅಂತರ್ಜಾಲತಾಣ ಮತ್ತು ಲೇಖನ ಹೊತ್ತಿಗೆಯ ಬೆಂಗಳೂರಿನ ಇಸ್ಕಾನ್​ ಹಿರಿಯ ಉಪಾಧ್ಯಕ್ಷ ಚಂಚಲಪತಿ ದಾಸ್​ ಚಾಲನೆ ನೀಡಲಿದ್ದಾರೆ. ಶಾಸಕರಾದ ಯಶ್ಪಾಲ್​ ಸುವರ್ಣ, ಗುರ್ಮೆ ಸುರೇಶ್​ ಶೆಟ್ಟಿ, ವಿದ್ವಾನ್​ ಹರಿದಾಸ್​ ಭಟ್​ ಭಾಗವಹಿಸಲಿದ್ದಾರೆ. ಒಂದು ಪುಸ್ತಕಕ್ಕೆ 100 ರೂ. ಮುದ್ರಣ ವೆಚ್ಚ ತಗುಲಿದೆ. ಇದಕ್ಕೆ ಕಾಣಿಕೆ ಐಚ್ಛಿಕವಾಗಿದೆ ಎಂದರು. ಮಠದ ಮ್ಯಾನೇಜರ್​ ವಾಸುದೇವ ಆಚಾರ್ಯ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!