ಮಂಗಳೂರು: ಮಿಲಾಗ್ರಿಸ್ ಕಾಲೇಜು, ICYM Mangalore Diocese ಹಾಗೂ Mangalore Runners Club ಸಹಯೋಗದಲ್ಲಿ “ಅಪೆಕ್ಸ್ ರನ್ 2026” ನಗರ ಮಟ್ಟದ ಮ್ಯಾರಥಾನ್ ಭಾನುವಾರ ಕಾಲೇಜು ಆವರಣದಲ್ಲಿ ಯಶಸ್ವಿಯಾಗಿ ನಡೆಯಿತು.
ಬೆಳಗ್ಗೆ 5:30ಕ್ಕೆ ಆರಂಭವಾದ ಓಟಕ್ಕೆ ಮಿಲಾಗ್ರಿಸ್ ಸಮೂಹ ಸಂಸ್ಥೆಗಳ ಸಂಚಾಲಕರಾದ ರೆ. ಫಾ. ಬೊನವೆಂಜರ್ ನಜರತ್, ರೆ. ಫಾ. ಮ್ಯಾಕ್ಸಿಮ್ ಮೋಂತೆರೋ ಹಾಗೂ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾದ ರೆ. ಡಾ. ಆಲ್ವಿನ್ ಸೆರಾವೋ ಚಾಲನೆ ನೀಡಿದರು.
ದೈಹಿಕ ಕ್ಷಮತೆ, ಆರೋಗ್ಯ ಜಾಗೃತಿ ಮತ್ತು ಸಮುದಾಯದ ಒಗ್ಗಟ್ಟನ್ನು ಉತ್ತೇಜಿಸುವ ಉದ್ದೇಶದಿಂದ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಸುಮಾರು 1500ಕ್ಕೂ ಹೆಚ್ಚು ಓಟಗಾರರು ಭಾಗವಹಿಸಿದ್ದರು. ಮ್ಯಾರಥಾನ್ ಮೂರು ವಿಭಾಗಗಳಲ್ಲಿ ನಡೆಯಿತು.
ಐದು ಕಿಲೋಮೀಟರ್ ಪುರುಷರ ವಿಭಾಗದಲ್ಲಿ ಗೋವಿಂದ ರಾಜ್ ಪ್ರಥಮ ಹಾಗೂ ಸತೀಶ್ ಕುಮಾರ್ ದ್ವಿತೀಯ ಸ್ಥಾನ ಪಡೆದರು. ಮಹಿಳಾ ವಿಭಾಗದಲ್ಲಿ ಧನ್ಯಾ ಪ್ರಭು ಪ್ರಥಮ ಮತ್ತು ಜೆಸ್ಸಿಕಾ ಸರೋಜಮ್ ದ್ವಿತೀಯ ಸ್ಥಾನ ಗಳಿಸಿದರು.
ಹತ್ತು ಕಿಲೋಮೀಟರ್ ಪುರುಷರ ವಿಭಾಗದಲ್ಲಿ ಚೆನ್ನಕೇಶವ ಜಿ.ಎಲ್. ಪ್ರಥಮ ಹಾಗೂ ರವಿ ಮಡಂತ್ಯಾರ್ ದ್ವಿತೀಯ ಸ್ಥಾನ ಪಡೆದರು. ಮಹಿಳಾ ವಿಭಾಗದಲ್ಲಿ ಜಯಶ್ರೀ ಬಿ.ಆರ್. ಪ್ರಥಮ ಮತ್ತು ಜಸ್ಮಿತಾ ಕೋಡೆಂಕೇರಿ ದ್ವಿತೀಯ ಸ್ಥಾನ ಪಡೆದರು.
ಕಾರ್ಯಕ್ರಮದ ಸಂಯೋಜಕರಾದ ಕ್ಲೈಡ್ ಡಿಸೋಜ ವಂದಿಸಿದರು. ಫ್ಲಾಯ್ಡ್ ಪಿಂಟೋ ಕಾರ್ಯಕ್ರಮ ನಿರೂಪಿಸಿದರು.