ಹೊಸದಿಲ್ಲಿ:ಅಡುಗೆ ಅನಿಲ ದುಬಾರಿಯಾದ ಬೆನ್ನಲ್ಲೇ ಅಟೋ ಗ್ಯಾಸ್ ದರ ಏರಿಕೆಯಾಯಿತು. ನಿನ್ನೆ ಮಧ್ಯರಾತ್ರಿ ಸಿ.ಎನ್.ಜಿ. ದರವೂ ಏರಿಕೆಯಾಗಿದೆ. ಇದರ ಬೆನ್ನಲ್ಲೇ ಪಳೆಯುಳಿಕೆ ಇಂಧನಗಳಾದ ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳವಾಗಲಿದೆ.
ಚಿನ್ನ ಖರೀದಿ ಮುಂದೂಡಿ, ಪ್ರಯಾಣ ಹೋಗಬೇಡಿ, ಇಂಧನ ಉಳಿಸಿ ಎಂಬ ಕೋರಿಕೆ ಸಹಿತ ಏಳು ಸಲಹೆ, ಮನವಿಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮುಂದಿಟ್ಟಿದ್ದರು. ಮಂಗಳೂರಿನ ಡಾ.ಅನಂತ ಪ್ರಭು ಸಹಿತ ಅನೇಕ ಗಣ್ಯರು ನಿಮ್ಮ ಜೊತೆ ಸಾಗುವ ಬೆಂಗಾವಲು ವಾಹನಗಳ ಸಂಖ್ಯೆ ಕಡಿಮೆ ಮಾಡಿ ಎಂದು ಪ್ರಧಾನಿಯವರಿಗೆ ಪ್ರಜೆಗಳ ಸಲಹೆ ನೀಡಿದ್ದರು.ಮಾಹಿತಿಗಳ ಪ್ರಕಾರ ಪ್ರಧಾನಿ ತಮ್ಮ ಬೆಂಗಾವಲು ವಾಹನಗಳ ಸಂಖ್ಯೆ ಕಡಿಮೆ ಮಾಡಿದ್ದಾರೆ.
ಆಮದು ಕಡಿಮೆ ಮಾಡುವ ಸಲಹೆ ಮಾಡಿದ್ದ ಪ್ರಧಾನಿ ಇಂಧನ ಬಿಕ್ಕಟ್ಟು ನಮ್ಮ ಮುಂದಿರುವ ಗಂಭೀರ ಸವಾಲು ಎಂದೂ ಹೇಳಿದ್ದರು. ತೈಲಕ್ಕೆ ಭಾರತ ಆಮದನ್ನೇ ಅವಲಂಬಿಸಿದೆ. ಮಧ್ಯಪ್ರಾಚ್ಯ ಬಿಕ್ಜಟ್ಟಿನಿಂದಾಗಿ ಪೂರೈಕೆ ಸರಪಳಿ ಅಸ್ತವ್ಯಸ್ತವಾಗಿದೆ. ಹೊರ್ಮುಜ್ ದಾಟಬೇಕಿದ್ದರೆ ಇರಾನ್ ಹೇಳಿದಷ್ಟು ಶುಲ್ಕ ಕೊಡಬೇಕು ಎಂಬ ವದಂತಿಯೂ ಇದೆ.ಇಷ್ಟೇ ಅಲ್ಲದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿದೆ.ತೈಲ ಮಾರಾಟ ಕಂಪೆನಿಗಳು ನಷ್ಟ ಅನುಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಜಾಗತಿಕ ಪರಿಸ್ಥಿತಿಗೆ ಅನುಗುಣವಾಗಿ ಭಾರತದಲ್ಲೂ ತೈಲ ದರ ಏರುವ ಸಮಯ ಸನ್ನಿಹಿತವಾಗಿದೆ.
ಈಗಾಗಲೇ ದುಬಾರಿ ದುನಿಯಾದಲ್ಲಿ ಬದುಕುತ್ತಿರುವ ಭಾರತೀಯ ಇನ್ನಷ್ಟು ದರ ಏರಿಕೆಯ ಬಿಸಿಯನ್ನು ತಾಳಲು ತಯಾರಾಗಬೇಕಿದೆ. ಇಂಧನ ದರ ಏರಿದರೆ ಅದರ ಬೆನ್ನಲ್ಲೇ ಎಲ್ಲ ಜೀವನಾವಶ್ಯಕ ವಸ್ತುಗಳ ದರವೂ ಏರುತ್ತದೆ. ಕೆಲವು ವಸ್ತುಗಳ ಕೊರತೆಯೂ ಉಂಟಾಗುತ್ತದೆ.ಮನೆ ಕಟ್ಟುತ್ತಿರುವವರಿಗೆ ಸಿಮೆಂಟ್ , ಕಬ್ಬಿಣ ದುಬಾರಿಯಾಗಲಿದೆ. ಸಾಗಾಟ ವೆಚ್ಚ ಏರುವುದರಿಂದ ಹಾಲು ದುಬಾರಿಯಾಗಲಿದೆ. ಸರಕಾರಿ ಬಸ್ ಗಳಲ್ಲಿ ಆಧಾರ್ ಕಾರ್ಡ್ ರಹಿತ ಪ್ರಯಾಣದ ಟಿಕೇಟ್ ಗಳು ದುಬಾರಿಯಾಗಲಿವೆ. ಕೊರತೆ ಆದಾಯವನ್ನು ತುಂಬಲು ಸರಕಾರಗಳು ಸೇವೆಗಳ ಮೇಲಿನ ಶುಲ್ಕವನ್ನು ಏರಿಸುವ ಸಾಧ್ಯತೆಗಳಿವೆ.