ಪೀಸ್ ಕ್ರಿಯೇಟಿವ್ ಆಂಗ್ಲ ಮಾಧ್ಯಮ ಸೆಂಟ್ರಲ್ ಶಾಲೆಯಲ್ಲಿ ಎರಡು ದಿನಗಳ ‘ಶಿಕ್ಷಕರ ತರಬೇತಿ ಕಾರ್ಯಕ್ರಮ’ಕ್ಕೆ ಚಾಲನೆ

​ ಮಂಜೇಶ್ವರ: “ಸರಿಯಾದ ಶಿಕ್ಷಣದ ಮೂಲಕ ರಾಷ್ಟ್ರದ ಸಬಲೀಕರಣ” ಎಂಬ ಘೋಷವಾಕ್ಯದೊಂದಿಗೆ ಮುನ್ನಡೆಯುತ್ತಿರುವ ಗಡಿಭಾಗದಲ್ಲಿರುವ ಪ್ರತಿಷ್ಠಿತ ಕುಂಜತ್ತೂರು ಪೀಸ್ ಕ್ರಿಯೇಟಿವ್ ಶಾಲೆಯಲ್ಲಿ ಶಿಕ್ಷಕರಿಗಾಗಿ ಹಮ್ಮಿಕೊಳ್ಳಲಾದ ಎರಡು ದಿನಗಳ ವಿಶೇಷ ತರಬೇತಿ ಕಾರ್ಯಕ್ರಮಕ್ಕೆ ಸೋಮವಾರದಂದು ಅದ್ದೂರಿಯ ಚಾಲನೆ ದೊರಕಿತು.

​ಎಲ್ ಕೆ ಜಿ ಯಿಂದ 10ನೇ ತರಗತಿಯವರೆಗಿನ ಶಿಕ್ಷಕರಿಗಾಗಿ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಪ್ರಸಿದ್ಧ ಶೈಕ್ಷಣಿಕ ಸಲಹೆಗಾರರು ಹಾಗೂ ಐಟೆಕ್

ತಂತ್ರಜ್ಞರಾದ ಶ್ರೀ ಶಿವರಾಜ್ ಕೆ. ಸಿ. ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಶಿಕ್ಷಕರಿಗೆ ಮಾರ್ಗದರ್ಶನ ನೀಡಿದರು.

ಸೋಮವಾರ ಬೆಳಿಗ್ಗೆ 9 ಗಂಟೆಗೆ ಆರಂಭವಾದ ಈ ಕಾರ್ಯಕ್ರಮದಲ್ಲಿ ಶಿಕ್ಷಕರ ಸಬಲೀಕರಣ ಮತ್ತು ತರಗತಿಗಳ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಲವು ವಿಷಯಗಳ ಬಗ್ಗೆ ಚರ್ಚಿಸಲಾಯಿತು.
​ ಆಧುನಿಕ ಶಿಕ್ಷಣ ಪದ್ಧತಿಗೆ ಪೂರಕವಾದ ಬೋಧನಾ ಕ್ರಮ, ತರಗತಿಗಳಲ್ಲಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳುವ ಬಗ್ಗೆ,
​ ಬೋಧನಾ ಕ್ಷೇತ್ರದಲ್ಲಿ ನಾಯಕತ್ವ ಗುಣಗಳನ್ನು ಹೇಗೆ ಬೆಳೆಸುವುದು, ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧಪಡಿಸುವ ಕುರಿತು ವಿಶೇಷ ಸಲಹೆಗಳನ್ನು ನೀಡಲಾಯಿತು.

​ ಕುಂಜತ್ತೂರು ಶಾಲೆಯಲ್ಲಿ ಈ ಸಲದಿಂದ 10 ನೇ ತರಗತಿ ಆರಂಭಗೊಂಡಿದ್ದು​”ಶಿಕ್ಷಕರನ್ನು ಸಬಲೀಕರಿಸುವ ಮೂಲಕ ವಿದ್ಯಾರ್ಥಿಗಳ ಉಜ್ವಲ ಭವಿಷ್ಯವನ್ನು ನಿರ್ಮಿಸುವುದು ನಮ್ಮ ಮುಖ್ಯ ಉದ್ದೇಶ” ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ.ಈ ತರಬೇತಿ ಶಿಬಿರವು ಮಂಗಳವಾರ ಕೂಡ ಮುಂದುವರಿಯಲಿದ್ದು, ಸಂಜೆ 3:30ಕ್ಕೆ ಸಮಾರೋಪಗೊಳ್ಳಲಿದೆ.

​ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲರಾದ ಅಬ್ದುಲ್ ಶಾದರ್, ಅಸಿಸ್ಟೆಂಟ್ ಪ್ರಾಂಶುಪಾಲ ಶಿಬಿನ್ ಇಜಾಝ್, ಕೋರ್ಡಿನೇಟರ್ ಗಳಾದ ಝಕಿಯ್ಯ ಬಾನು, ಆಯಿಷಾ, ರೋಶ್ನಿ, ರಶೀದಾ, ಆಡಳಿತ ಮಂಡಳಿಯ ಸದಸ್ಯರು ಹಾಗೂ ಕೆ.ಜಿ ಯಿಂದ 10ನೇ ತರಗತಿಯವರೆಗಿನ ಎಲ್ಲಾ ಬೋಧಕ ಸಿಬ್ಬಂದಿಗಳು ಸಕ್ರಿಯವಾಗಿ ಪಾಲ್ಗೊಂಡರು.

SHARE
Loading spinner

Leave a Reply

Your email address will not be published. Required fields are marked *

error: Content is protected !!