DYFI ಕುಳೂರು ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಯಶಸ್ವಿ

ಕುಳೂರು, ಜೂನ್ 1: DYFI ಕುಳೂರು ಯೂನಿಟ್ ಸಮಿತಿಯ ನೇತೃತ್ವದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮವನ್ನು ವಾರ್ಡ್ ಸದಸ್ಯೆ ಶರ್ಮಿಳಾ ಎಂ. ಶೆಟ್ಟಿ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ವಿಲೇಜ್ ಕಾರ್ಯದರ್ಶಿ ಉದಯ್ CH, ಬ್ಲಾಕ್ ಜಂಟಿ ಕಾರ್ಯದರ್ಶಿ ಪದ್ಮಜಾ ಹಾಗೂ ಬ್ರಾಂಚ್ ಕಾರ್ಯದರ್ಶಿ ದಯಾನಂದ ಕುಳೂರು ಭಾಗವಹಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ವಿಲೇಜ್ ಸಮಿತಿ ಸದಸ್ಯ ಪ್ರವೀಣ್ ಸ್ವಾಗತಿಸಿದರು. ಯೂನಿಟ್ ಅಧ್ಯಕ್ಷ ಪ್ರಜ್ವಲ್ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ SSLC ಹಾಗೂ ದ್ವಿತೀಯ ಪಿಯುಸಿ (+2) ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಪ್ರಶಂಸಿಸಿದ ಗಣ್ಯರು, ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡುವಂತೆ ಶುಭ ಹಾರೈಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!