ಜಗತ್ತಿನಲ್ಲಿಯೇ ಅತೀ ಹೆಚ್ಚು ಪ್ರೇಕ್ಷಕರಿರುವ ಕ್ರೀಡಾಕೂಟ ಆಗಿರುತ್ತದೆ ಫಿಫಾ ವಿಶ್ವಕಪ್ .
2026 ರಇಂಡಿಯನ್ ಪ್ರೀಮಿಯರ್ ಲೀಗ್ ಎಂಬ ಕ್ರಿಕೆಟ್ ಪಂದ್ಯಾವಳಿಯ ವಿಜೇತರು ಯಾರು ಎಂಬ ಕುತೂಹಲ ಕ್ರೀಡಾಭಿಮಾನಿಗಳಲ್ಲಿ ಕೊನೆಗೊಂಡ ಸಮಯದಲ್ಲಿ ಮತ್ತೊಂದು ಜಗತ್ತಿನ ಅತಿ ದೊಡ್ಡ ಹೆಚ್ಚು ಪ್ರೇಕ್ಷಕರನ್ನು ಮನರಂಜಿಸುವ ಮತ್ತೊಂದು ಪಂದ್ಯಾವಳಿ ಆಗಿರುತ್ತದೆ ಫಿಫಾ ವಿಶ್ವಕಪ್. 2026ರ ಫಿಫಾ ವಿಶ್ವಕಪ್ ಯಾವ ದೇಶದ ಮುಡಿಗೇರುತ್ತದೆ ಎಂಬ ಕುತೂಹಲಕ್ಕೆ ನಾಳೆಯಿಂದ ಚಾಲನೆ ದೊರಕಳಿದೆ.ಉತ್ತರ ಅಮೆರಿಕ ಭೂಖಂಡದಲ್ಲಿ ಚರಿತ್ರೆಯಲ್ಲಿ ಮೊದಲ ಬಾರಿಗೆ ಮೂರು ದೇಶಗಳ ಆತಿಥ್ಯದಲ್ಲಿ 23ನೇ ಆವೃತ್ತಿಯ ಫಿಫಾ ವಿಶ್ವಕಪ್ ಪ್ರಾರಂಭವಾಗಲಿದೆ.ಕೆನಡಾ ಮೆಕ್ಸಿಕೋ ಮತ್ತು ಅಮೆರಿಕದ ಜಂಟಿ ಆತಿಥ್ಯದಲ್ಲಿ ಸುಮಾರು 48 ತಂಡಗಳು ಅರ್ಹತೆ ಪಡೆದಿದ್ದು ಜೂನ್ 11 ರಂದು ಮೆಕ್ಸಿಕೋ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ಮಧ್ಯೆ ಮೊದಲ ಪಂದ್ಯ ನಡೆಯಲಿದೆ. We are 26 ಎಂಬ ಅಭಿಯಾನದ ಮೂಲಕ ಪ್ರಾರಂಭವಾಗುವ ಪಂದ್ಯಾಟ ಜುಲೈ ತಿಂಗಳ 19 ರಂದು ಅಮೆರಿಕದ ಮೆಟ್ ಲೈಫ್ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯಾಟ ನಡೆಯುತ್ತದೆ.ಈ ಕ್ರೀಡಾಂಗಣದ ವಿಶೇಷತೆ ಎಂದರೆ ಸುಮಾರು 83,000 ಪ್ರೇಕ್ಷಕರಿಗೆ ಪಂದ್ಯಾಟವನ್ನು ವೀಕ್ಷಣೆ ಮಾಡಲು ಸ್ಥಳಾವಕಾಶ ಇರುವ ಕ್ರೀಡಾಂಗಣವಾಗಿದೆ.ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಫಿಫಾ ವಿಶ್ವಕಪ್ ಆಯೋಜಿಸಲಾಗುತ್ತದೆ ಆದರೆ 1942 ಮತ್ತು 1946ರಲ್ಲಿ ಎರಡನೇ ಜಾಗತಿಕ ಯುದ್ಧದ ಪರಿಣಾಮವಾಗಿ ಫಿಫಾ ವಿಶ್ವಕಪ್ ಪಂದ್ಯಾಟ ನಡೆಯಲಿಲ್ಲ.
ಫ್ರಾನ್ಸ್ ದೇಶದ ಪ್ಯಾರಿಸ್ ನಲ್ಲಿ 1904 ಮೇ ತಿಂಗಳ 21ನೇ ತಾರೀಖಿನಂದು ವಿಶ್ವದೆಲ್ಲೆಡೆ ಫುಟ್ಬಾಲ್ ಪಂದ್ಯಾಟವನ್ನು ಆಯೋಜಿಸಲು ನಡೆಸಲು ಸ್ಥಾಪಿಸಿದ ಸಂಸ್ಥೆಯಾಗಿದೆ ಫಿಫಾ (FIFA-Federation Internationale de Football Association). ಇದರ ಪ್ರಧಾನ ಕೇಂದ್ರ ಕಛೇರಿ
ಸ್ವಿಜರ್ಲ್ಯಾಂಡಿನ ಜುರಿಕ್ ಆಗಿದೆ. 1930 ರಲ್ಲಿ ನಡೆದ ಚೊಚ್ಚಲ ಫಿಫಾ ವಿಶ್ವಕಪ್ ಪಂದ್ಯಾವಳಿಯು ಉರುಗ್ವೆ ದೇಶದ ಆತಿಥ್ಯದಲ್ಲಿ ನಡೆಯಿತು. ಈ ಪಂದ್ಯಾವಳಿಯಲ್ಲಿ 13 ತಂಡಗಳು ಅರ್ಹತೆಯನ್ನು ಪಡೆದಿದ್ದವು.ಫೈನಲ್ ಪಂದ್ಯಾಟದಲ್ಲಿ ಆತಿಥೇಯ ದೇಶವಾದ ಉರುಗ್ವೆ ಅರ್ಜೆಂಟಿನ ದೇಶದ ತಂಡವನ್ನು 4-2 ಗೋಲುಗಳ ಅಂತರದಿಂದ ಪರಾಭವಗೊಳಿಸಿ ಪ್ರಶಸ್ತಿಯನ್ನು ಮುಡಿಗೇರಿಸಿತು. ಎರಡನೇ ಫಿಫಾ ವಿಶ್ವಕಪ್ ಪಂದ್ಯಾವಳಿ ಇಟಲಿ ದೇಶದ ಆತಿಥ್ಯದಲ್ಲಿ 1934 ರಲ್ಲಿ ನಡೆಯಿತು. ಈ ಪಂದ್ಯಾಟದಲ್ಲಿ ಕೂಡ ಆತಿಥ್ಯ ರಾಷ್ಟ್ರವಾದ ಇಟಲಿ ಪ್ರಶಸ್ತಿಯನ್ನು ಪಡೆದುಕೊಂಡಿತ್ತು.ಕೊನೆಯದಾಗಿ ಅಂದರೆ 2022 ರಲ್ಲಿ ಫಿಫಾ ವಿಶ್ವ ಪಂದ್ಯಾವಳಿಯು ಏಷ್ಯಾ ಭೂಖಂಡದ ದೇಶವಾದ ಖತರ್ ನಲ್ಲಿ ನಡೆಯಿತು.ಬಹಳ ರೋಚಕವಾಗಿ ನಡೆದ ಪೈನಲ್ ಪಂದ್ಯಾಟ ಫ್ರಾನ್ಸ್ ಮತ್ತು ಅರ್ಜೆಂಟಿನ ದೇಶಗಳ ನಡುವೆ ಸೆಣಸಾಟ ನಡೆದಿತ್ತು.ನಿಯಮಿತ ಸಮಯ ಮತ್ತು ಹೆಚ್ಚುವರಿ ಸಮಯದ ನಂತರ 3-3 ಗೋಲುಗಳ ಮೂಲಕ ಸಮಬಲ ಹೋರಾವಾಗಿತ್ತು.ಕೊನೆಗೆ ನಡೆದ ಫೆನಾಲ್ಟಿ ಶೂಟ್ ಔಟ್ ನಲ್ಲಿ 2 ರ ಎದುರು 4 ಗೋಲುಗಳನ್ನು ಹೊಡೆಯುವ ಮೂಲಕ ಅರ್ಜೆಂಟಿನ ತಂಡವು 2022 ರ ಫಿಫಾ ವಿಶ್ವಕಪ್ ಕಿರೀಟವನ್ನು ತನ್ನದಾಗಿಸಿಕೊಂಡಿತು. ಅತ್ಯಂತ ಹೆಚ್ಚು ಆರಾಧಕರನ್ನು ಪಡೆದಿರುವ ಮೆಸ್ಸಿ ಗೋಲ್ಡನ್ ಬಾಲ್ ಪ್ರಶಸ್ತಿಯನ್ನು ಪಡೆದರು.
1930 ರಲ್ಲಿ ನಡೆದು ಮೊದಲ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ 13 ತಂಡಗಳು ಅರ್ಹತೆಯನ್ನು ಪಡೆದಿದ್ದರೆ 2026 ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ 48 ತಂಡಗಳು ಅರ್ಹಹತೆಯನ್ನು ಪಡೆದಿರುತ್ತದೆ. ಆದರೆ ಭಾರತದ ಫುಟ್ಬಾಲ್ ಪ್ರೇಮಿಗಳಿಗೆ ಬಹಳ ಬೇಸರದ ವಿಷಯ ಏನೆಂದರೆ ನಮ್ಮ ದೇಶವು ಅರ್ಹಹತೆಯನ್ನು ಪಡೆದಿಲ್ಲ ಎಂದು.
ಅತಿ ಹೆಚ್ಚು ಸಲ ಅಂದರೆ 5 ಸಲ ಬ್ರೆಝಿಲ್ ತಂಡವು ಪ್ರಶಸ್ತಿಯನ್ನು ಗೆದ್ದ ರಾಷ್ಟ್ರವಾಗಿದೆ. ಜರ್ಮನಿ ಮತ್ತು ಇಟೆಲಿ ತಲಾ 4 ಸಲ ಪ್ರಶಸ್ತಿ ಪಡೆದಿರುತ್ತದೆ. ವಿಶೇಷವೆಂದರಿ 5 ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾಗವಹಿಸಿದ ಆಟಗಾರ ಕ್ರಿಸ್ಟಿಯಾನೋ ರೊನೋಲ್ಡೊ ಆಗಿರುತ್ತಾರೆ. 3 ಸಲ ವಿಶ್ವಕಪ್ ಗೆದ್ದಂತಹ (1958, 1962, 1970 ) ಪೀಲೆ ಅವರನ್ನು ಪುಟ್ ಬಾಲಿನ ದಂಥಕತೆ ಎಂದು ಬಣ್ಣಿಸುತ್ತಾರೆ. ಈ ಆವೃತ್ತಿಯಲ್ಲಿ ವಿಜೇತ ತಂಡವು 55 ಮಿಲಿಯನ್ ಅಮೇರಿಕ ಡಾಲರ್ ಹಣದ ತನ್ನದಾಗಿಸುತ್ತಾರೆ. ಹಾಗೂ 18 ಕ್ಯಾರೆಟ್ ಚಿನ್ನದ 6 kg ತೂಕದ ಟ್ರೋಪಿ ತನ್ನದಾಗಿಸುತ್ತಾರೆ. ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆಯುವ ತಂಡಗಳು ಕ್ರಮವಾಗಿ 33 ಮಿಲಿಯನ್ ಅಮೇರಿಕನ್ ಡಾಲರ್ ಹಾಗೂ 29 ಅಮೇರಿಕನ್ ಡಾಲರ್ ಸಂಭಾವಣೆ ಪಡೆಯುತ್ತದೆ. ಈ ಆವೃತ್ತಿಯ ವಿಶ್ವಕಪ್ ಯಾರ ಪಾಲಿಗೆ ಒಳಿಯುತ್ತದೆ ಎಂದು ನಾವು 2026 ಜುಲೈ 19 ರ ವರೆಗೆ ಕಾಯುವ ಮತ್ತು ಎಲ್ಲಾ ತಂಡಗಳಿಗೆ ಶುಭ ಹಾರೈಸುವ . ಮುಂದಿನ ಆವೃತ್ತಿಯಲ್ಲಿ ಆದರೂ ಭಾರತೀಯ ತಂಡ ಅರ್ಹತೆ ಪಡೆಯಲು ಆಶಿಸುವ
✍️ರಾಜೇಶ್ ಕೊಡ್ಲಮೊಗರು