ನಮ್ಮ ಮೀಡಿಯಾ 24X7 ನ ಸಂಗೀತ ರಿಯಾಲಿಟಿ ಶೋ ಗೆ ಅದ್ಧೂರಿ ಚಾಲನೆ .ಗೆಲುವಿನ ಪ್ರಯತ್ನ ಸಹಜ , ಆದರೆ ವೇದಿಕೆ ಲಭಿಸುವುದೇ ವಿಜಯದ ಮೆಟ್ಟಿಲು – ಕೊಂಡೆವೂರು ಶ್ರೀ .

ಮಂಜೇಶ್ವರ : ಕರಾವಳಿಯ ನಾಡಿಮಿಡಿತ ಜನತೆಯ ಧ್ವನಿಯಾಗಿರುವ ನಮ್ಮ ಮೀಡಿಯಾ 24X7 ನ ಬಹು ನಿರೀಕ್ಷೆಯ ಸಂಗೀತ ರಿಯಾಲಿಟಿ ಶೋ ವಾಯ್ಸ್ ಒಫ್ ನಮ್ಮ ಮೀಡಿಯಾ 2025 ಕ್ಕೆ ಅದ್ಧೂರಿ ಚಾಲನೆ ದೊರೆಯಿತು.ಕೊಂಡೆವೂರು ನಿತ್ಯಾನಂದ ವಿದ್ಯಾಪೀಠದಲ್ಲಿ ನಡೆದ ಪ್ರಥಮ ಹಂತದ ಆಡಿಷನ್ ಕಾರ್ಯಕ್ರಮವನ್ನು ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ದೀಪ ಬೆಳಗಿಸಿ ಉಧ್ಘಾಟಿಸಿದರು.

ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀ ಗಳು ಗೆಲುವಿಗೋಸ್ಕರ ನಾವು ಪ್ರಯತ್ನ ಪಡುತ್ತಿರುವುದು ಸಹಜವಾದುದು , ಆದರೆ ಇಂತಹ ವೇದಿಕೆ ಲಭಿಸುವುದೇ ವಿಜಯದ ಮೊದಲ ಮೆಟ್ಟಿಲು ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು. ಈ ನಿಟ್ಟಿನಲ್ಲಿ ಮಕ್ಕಳ ಪ್ರತಿಭಾ ಸಾಮರ್ಥ್ಯದ ಅನಾವರಣಕ್ಕೆ ವೇದಿಕೆ ಕಲ್ಪಿಸಿ ಕೊಟ್ಟ ನಮ್ಮ ಮೀಡಿಯಾ 24X7 ನ ಈ ಕಾರ್ಯ ಶ್ಲಾಘನೀಯವಾಗಿದ್ದು ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು .ಗ್ರಾಮೀಣ ಪ್ರದೇಶದಲ್ಲಿ ಪ್ರತಿಭಾ ವಂಚಿತರಿಗೆ ಇಂತಹ ಅವಕಾಶ ಲಭಿಸುತ್ತಿರುವುದು ಅಭಿನಂದನಾರ್ಹ ಎಂದರು.


ಕಾರ್ಯಕ್ರಮದಲ್ಲಿ ಸಾಮಾಜಿಕ ಧಾರ್ಮಿಕ ಮುಂದಾಳು ಶ್ರೀ ಜಯಪ್ರಕಾಶ್ ನಾರಾಯಣ ತೊಟ್ಟತೋಡಿ ,ನಮ್ಮ ಮೀಡಿಯಾ 24X7 ನ ಆಡಳಿತ ನಿರ್ದೇಶಕ ಶ್ರೀ ಜಗದೀಶ್ ಮಡಿವಾಳ , ಧಾರ್ಮಿಕ ಮುಂದಾಳುಗಳಾದ ಶ್ರೀ ದಿನಕರ ಹೊಸಂಗಡಿ, ಶ್ರೀ ಗಂಗಾಧರ ಆಚಾರ್ಯ ಹೊಸಂಗಡಿ,ತೀರ್ಪುಗಾರರಾದ ಶ್ರೀಮತಿ ಅರುಣಾ ರಾವ್ ಕಟೀಲ್ , ಶ್ರೀ ಸತ್ಯನಾರಾಯಣ ಐಲ, ಮತ್ತು ದರ್ಶಕ್ ಭಾಸ್ಕರ್ ಹೊಸಂಗಡಿ ಮುಂತಾದವರು ಉಪಸ್ಥಿತರಿದ್ದು ,ಕಾರ್ಯಕ್ರಮಕ್ಕೆ ಶುಭಾಂಶನೆ ಗೈದರು .

ಕಾಸರಗೋಡು , ಮಂಗಳೂರು ,ಉಡುಪಿ ಜಿಲ್ಲೆಗಳ 6 ರಿಂದ 16 ವರ್ಷಗಳ ಒಳಗಿನ ಉದಯೋನ್ಮುಖ ಗಾನ ಪ್ರತಿಭೆಗಳಿಗೆ ಈ ರಿಯಾಲಿಟಿ ಶೋ ಏರ್ಪಡಿಸಲಾಗಿದೆ. ಆಡಿಷನ್ ನಲ್ಲಿ ಆಯ್ಕೆಯಾದ ಪ್ರತಿಭೆಗಳಿಗೆ ಮೆಗಾ ಆಡಿಷನ್ ,ಸೆಮಿಫೈನಲ್ ಮತ್ತು ಫೈನಲ್ ಹಂತದವರೆಗೆ ಸ್ಪರ್ಧೆ ಏರ್ಪಡಿಸಲಾಗಿದೆ.


ಯುವ ಗಾಯಕಿಯರಾದ ಶ್ರಮಿತ ಸುವರ್ಣ ಬೆಜ್ಜ ಮತ್ತು ರಶ್ಮಿತಾ ಆಚಾರ್ಯ ಹೊಸಂಗಡಿ ಪ್ರಾರ್ಥನೆ ಹಾಡಿದರು. ಬಹುಭಾಷಾ ನಿರೂಪಕ ದಿವಾಕರ್ ಉಪ್ಪಳ ಕಾರ್ಯಕ್ರಮವನ್ನು ನಿರೂಪಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!