ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸಂಟ್ಯಾರ್ ಬ್ರಾಂಚ್ ವತಿಯಿಂದ ಸಂಸ್ಥಾಪನ ದಿನ ಧ್ವಜಾರೋಹಣ ಕಾರ್ಯಕ್ರಮ

ಪುತ್ತೂರು :- ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸಂಟ್ಯಾರ್ ಬ್ರಾಂಚ್ ವತಿಯಿಂದ ಸಂಸ್ಥಾಪನಾ ದಿನದ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ಸಂಟ್ಯಾರ್ ಶಾಲಾ ಬಳಿ ನಡೆಯಿತು.

ಧ್ವಜಾರೋಹಣ ನಡೆಸಿ ಸಂಸ್ಥಾಪನ ದಿನದ ಸಂದೇಶ ನೀಡಿ ಮಾತನಾಡಿದ ಎಸ್‍ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರದ ಜೊತೆ ಕಾರ್ಯದರ್ಶಿಯಾದ ಅಬ್ದುಲ್ ರಹಿಮಾನ್ ಪುತ್ತೂರುರವರು ದೇಶದಲ್ಲಿ ಎಸ್ ಡಿ ಪಿ ಐ ಹಲವು ಸವಾಲುಗಳನ್ನು ದಿಟ್ಟವಾಗಿ ಎದುರಿಸಿ ಮುನ್ನುಗ್ಗುತ್ತಿದೆ, ಈ ದೇಶದ ಸಂವಿಧಾನದ ಉಳಿವಿಗೆ ಸದೃಢ ಭಾರತದ ನಿರ್ಮಾಣಕ್ಕೆ ಎಸ್ ಡಿ ಪಿ ಐ ಪಣತೊಟ್ಟು ಹೋರಾಟವನ್ನು ನಡೆಸುತ್ತಿದೆ. ಈ ದೇಶದ ಸಾರ್ವಭೌಮತೆ ಹಾಗು ಸಾಮರಸ್ಯವನ್ನು ಅಳಿಸುವ ಶಕ್ತಿಗಳನ್ನು ತಡೆಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂಬ ಸಂದೇಶವನ್ನು ನೀಡಿದರು.

ಎಸ್ ಡಿ ಪಿ ಐ ಸಂಟ್ಯಾರು ಬ್ರಾಂಚ್ ಅಧ್ಯಕ್ಷರಾದ ಝಕರಿಯಾ ಎಚ್ ಇ,ಎಸ್ ಡಿ ಪಿ ಐ ಕುಂಬ್ರ ಬ್ಲಾಕ್ ಉಪಾಧ್ಯಕ್ಷರಾದ ಅಶ್ರಫ್ ಎಚ್ ಇ,ಎಸ್ ಡಿ ಪಿ ಐ ಆರ್ಯಾಪು ಗ್ರಾಮ ಸಮಿತಿ ಅಧ್ಯಕ್ಷರಾದ ಬಶೀರ್ ವಾಗ್ಲೆ ಉಪಸ್ಥಿತರಿದ್ದರು.

ಎಸ್ ಡಿ ಪಿ ಐ ಸಂಟ್ಯಾರ್ ಬ್ರಾಂಚ್ ಕಾರ್ಯದರ್ಶಿ ಶಾಫಿ ಮರಿಕೆ ಸ್ವಾಗತಿಸಿ, ವಂದಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!