ಕಾಸರಗೋಡು: ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ.), ಕಾಸರಗೋಡು ವತಿಯಿಂದ ಗಡಿನಾಡ ಕನ್ನಡತಿ ಡಾ.ವಾಣಿಶ್ರೀ ಕಾಸರಗೋಡು ಅವರ ನೇತೃತ್ವದಲ್ಲಿ “ಜಲಪಾತ ಸಾಂಸ್ಕೃತಿಕ ” ಎಂಬ 237 ನೇ ವಿಶಿಷ್ಟ ದಾಖಲೆ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ, ಗಾನ ಮತ್ತು ನೃತ್ಯ ವೈಭವ ಕಾರ್ಯಕ್ರಮವು ಶ್ರೀ ಸತ್ಯನಾರಾಯಣ ಭಜನಾ ಮಂದಿರದ ಸಮೀಪದ ಪೊಟ್ಟಿಪ್ಪಲ ಜಲಪಾತದ ಸುಂದರ ಪರಿಸರದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಕನ್ನಡ ನಾಡಿನ ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರತಿಬಿಂಬಿಸುವ ಹುಲಿಕುಣಿತ, ಸಮೂಹ ನೃತ್ಯ ಭಕ್ತಿ ನೃತ್ಯ ಹಾಗೂ ಅಭಿನಯ ಗೀತೆ ಕನ್ನಡ ಹಾಡಿನ ಗಾಯನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಗಮನ ಸೆಳೆದವು.
ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಶ್ರೀಮಂತಿಕೆಯನ್ನು ಗಡಿನಾಡಿನ ಜನರಿಗೆ ಪರಿಚಯಿಸುವ ಉದ್ದೇಶದಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಕಲಾವಿದರು ಉತ್ಸಾಹದಿಂದ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು. ಪೊಟ್ಟಿಪ್ಪಲ ಜಲಪಾತದ ನೈಸರ್ಗಿಕ ಸೌಂದರ್ಯದ ನಡುವೆ ನಡೆದ ಸಾಂಸ್ಕೃತಿಕ ವೈಭವ ಕಾರ್ಯಕ್ರಮವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸುತ್ತಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಪರಂಪರೆಯನ್ನು ಮೆಲುಕು ಹಾಕಲಾಯಿತು. ಸಂಘದ ಎಲ್ಲಾ ಪದಾಧಿಕಾರಿಗಳು ಮತ್ತು ವಿಶ್ವ ತುಳುವೆರ್ (ರಿ) ಮಂಗಳೂರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಪ್ರಕೃತಿಯ ಸೌಂದರ್ಯ, ಸ್ವಚ್ಛಂದ ಹರಿಯುವ ನೀರಿನ ಜೊತೆಗೆ ಕನ್ನಡ ಸಾಹಿತ್ಯ ಸಂಸ್ಕೃತಿಯನ್ನು ಪೋಣಿಸಿ ಪರಿಸರ ಜಾಗೃತಿ ಯೊಂದಿಗೆ ಕನ್ನಡ ಸಾಹಿತ್ಯ ಕೆಲಸವನ್ನು ಮುಂದುವರಿಸಬೇಕು ಎಂದು ಸಂಘದ ಅಧ್ಯಕ್ಷರಾದ ಡಾ. ವಾಣಿಶ್ರೀ ಕಾಸರಗೋಡು ಅಭಿಪ್ರಾಯಪಟ್ಟರು.ಕಾರ್ಯಕ್ರಮದಲ್ಲಿ ಸಂಸ್ಥೆಯ ಕಲಾನಕ್ಷತ್ರಗಳಾದ ಸುರೇಶ್ ಉಡುಪಿ,ಉಮೇಶ್ ಪಟ್ಟಾಜೆ,ಸೀತಾ ಉಡುಪಿ, ಸ್ಮಾಹಿ,ಧೀರಜ್ ಉಡುಪಿ, ಅಜಿತ್ ಉಡುಪಿ, ಜಿಹಾನ್. ಸೌಮ್ಯ ಮಲ್ಲ, ಅಮೃತ್. ಐಶ್ವರ್ಯ, ರೋಹಿತ್, ಜಯಂತಿ, ಕೃಪಾಶ್ರೀ,ಜಾಹ್ನವಿ, ಆತ್ಹ್ಮಿಕ, ಯಶಸ್ವಿನಿ, ಹರ್ಷಿಶ್, ರಿಶ್ವoತ್. ಹೇಮಲತಾ ತೊಕ್ಕೊಟ್. ಗಣೇಶ್ ಬಲ್ಲಾಳ್. ರಾಜೇಶ್ ಉಲ್ಲಾಳ್,ತನ್ವಿಶ್, ಸುವಾನ್,ಸಾನ್ವಿ ಉಡುಪಿ,ದಯಾನಂದ, ಪ್ರಕಾಶ್, ಗಣೇಶ್ ಕುಮಾರ್ ಜಿಯಾನ್,ತೇಜಸ್ವಿನಿ, ಸೀತಾರಾಮ್ ಮಲ್ಲ ಡೊಲ್ಸಿ ಜಿ ಎಸ್ ಉಲ್ಲಾಳ್ ಮುಂತಾದವರು ಭಾಗವಹಿಸಿ ಹೊಸ ದಾಖಲೆಯ ರೂವಾರಿಗಳಾದರು.

