ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ಕಾಸರಗೋಡು , ಕಾಸರಗೋಡು ಜಿಲ್ಲಾ ನವಜೀವನ ಸಮಿತಿಯಲ್ಲಿ ಒಂದಾದ ಕುತ್ಯಾಳ ಶ್ರೀ ನವಜೀವನ ಸಮಿತಿ ಕೂಡ್ಲು ವತಿಯಿಂದ ಕುತ್ಯಾಳ ಶ್ರೀ ನವಜೀವನ ಸಮಿತಿಯ ಸದಸ್ಯರ ಮಕ್ಕಳಿಗೆ 2025 – 2026 ನೇ ಸಾಲಿನ SSLC ಹಾಗೂ +2 ಉತ್ತೀರ್ಣರಾದ ವಿಧ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಕೂಡ್ಲು ಶಾಲೆಯಲ್ಲಿ ನಡೆಯಿತು .
ಮಧೂರು ಗ್ರಾಮಪಂಚಾತಿನ ಉಪಾಧ್ಯಕ್ಷರಾದ ಶ್ರೀ ಭಾನುಪ್ರಕಾಶ್ ದೀಪ ಬೆಳಗಿಸಿ ಉದ್ಘಾಟಿಸಿದರು . ಕುತ್ಯಾಳ ಶ್ರೀ ನವಜೀವನ ಸಮಿತಿಯ ಅಧ್ಯಕ್ಷರಾದ ಶ್ರೀ ನಾರಾಯಣ ಪೂಜಾರಿ ಪಾರೆಕಟ್ಟೆ ಅಧ್ಯಕ್ಷ ಸ್ಥಾನ ವಹಿಸಿದರು . ಈ ಸಂದರ್ಭದಲ್ಲಿ ಮಧೂರು ಗ್ರಾ.ಪಂ.ಸದಸ್ಯರಾದ ಶ್ರೀ ಸುಕುಮಾರ ಕುದ್ರೆಪ್ಪಾಡಿ , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಸರಗೋಡು ತಾಲೂಕಿನ ಮಾನ್ಯ ಯೋಜನಾಧಿಕಾರಿ ಶ್ರೀ ದಿನೇಶ್ , ಕಾಸರಗೋಡು ವಲಯದ ಮೇಲ್ವಿಚಾರಕರಾದ ಶ್ರೀ ಗೋಪಾಲಕೃಷ್ಣ , ಕಾಸರಗೋಡು ತಾಲೂಕಿನ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಶ್ರೀ ಜಯರಾಮ ಪಾಟಲಿ , ಉಳಿಯತ್ತಡ್ಕ ಕಾರ್ಯ ಕ್ಷೇತ್ರದ ಸೇವಾಪ್ರತಿನಿಧಿ ಶ್ರೀಮತಿ ಜ್ಯೋತಿ ಮಾಯಿಪ್ಪಾಡಿ , ಕುತ್ಯಾಳ ಶ್ರೀ ನವಜೀವನ ಸಮಿತಿಯ ಅಧ್ಯಕ್ಷರಾದ ಶ್ರೀ ನಾರಾಯಣ ಪೂಜಾರಿ ಪಾರೆಕಟ್ಟೆ , ಕುತ್ಯಾಳ ಶ್ರೀ ನವಜೀವನ ಸಮಿತಿಯ ಗೌರವ ಅಧ್ಯಕ್ಷರಾದ ಶ್ರೀ ಉದಯ ಕುಮಾರ್ , ಕುತ್ಯಾಳ ಶ್ರೀ ನವಜೀವನ ಸಮಿತಿಯ ಕಾರ್ಯದರ್ಶಿ ಶ್ರೀ ಬಿಜು ಕಪ್ಪಣ , ಕುತ್ಯಾಳ ಶ್ರೀ ನವಜೀವನ ಸಮಿತಿಯ ಖಜಾಜಿ ಶ್ರೀ ಸಂತೋಷ್ ಕುಮಾರ್ ಉಳಿಯತ್ತಡ್ಕ , ವಲಯ ಅಧ್ಯಕ್ಷರಾದ ಶ್ರೀ ಕಿರಣ್ ಮಾಸ್ಟರ್ ಕೂಡ್ಲು , ಕುತ್ಯಾಳ ಶ್ರೀ ನವಜೀವನ ಸಮಿತಿ ಸದಾಸ್ಯರಾದ ಶ್ರೀ ರಾಜೇಶ್ ರಾಜನ್ ಬೀರಂತಬೈಲ್ , ಶ್ರೀ ರಾಮಕೃಷ್ಣ ಮಜಲ್ , ಉಪಸ್ಥಿತರಿದ್ದರು .
ಈ ಸಂದರ್ಭದಲ್ಲಿ 2025 – 2026 ನೇ ಸಾಲಿನ SSLC ಹಾಗೂ +2 ಉತ್ತೀರ್ಣರಾದ ಕುತ್ಯಾಳ ಶ್ರೀ ನವಜೀವನ ಸಮಿತಿಯ ಸದಾಸ್ಯರ ಮಕ್ಕಳನ್ನ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು . ಈ ಕಾರ್ಯಕ್ರಮವನ್ನು ಕುತ್ಯಾಳ ಶ್ರೀ ನವಜೀವನ ಸಮಿತಿಯ ಕಾರ್ಯದರ್ಶಿ ಶ್ರೀ ಬಿಜು ಕಪ್ಪಣ ನಿರೂಪಿಸಿ , ಉಳಿಯತ್ತಡ್ಕ ಕಾರ್ಯ ಕ್ಷೇತ್ರದ ಸೇವಾಪ್ರತಿನಿಧಿ ಶ್ರೀಮತಿ ಜ್ಯೋತಿ ಮಾಯಿಪ್ಪಾಡಿ ಸ್ವಾಗತಿಸಿ , ಕುತ್ಯಾಳ ಶ್ರೀ ನವಜೀವನ ಸಮಿತಿಯ ಸದಸ್ಯಾರಾದ ಶ್ರೀ ಉದಯ ಕುಮಾರ್ ಮಧೂರು ವಂದಿಸಿದರು .