ಮಂಜೇಶ್ವರ: ಹಿತಿಹಾಸ ಪ್ರಸಿದ್ಧ ಪುರಾತನ ದೈವ ಸಾನ್ನಿಧ್ಯವಾಗಿರುವ ಬಂಗ್ರಮಂಜೇಶ್ವರ ಪೊಯ್ಯೆಕಂಡ ಮಲರಾಯ ದೈವಸ್ಥಾನದ ನವೀಕರಣ ಕಾರ್ಯಕ್ಕೆ ಭಕ್ತರು ತೀರ್ಮಾನಿಸಿ ಜೂನ್ 21ರಂದು ಬಡಾಜೆ ತಂತ್ರಿಯವರ ದಿವ್ಯ ಉಪಸ್ಥಿತಿಯಲ್ಲಿ ಬಾಲಾಲಯ ಪ್ರತಿಷ್ಠಾಪನೆ ನೆರವೇರಿತು
ಮಲರಾಯ ,ಬಬ್ಬರ್ಯ ,ನಾಗದೇವರ ಸಾನಿಧ್ಯ ವಿರುವ ಈ ದೈವಸ್ಥಾನವನ್ನು ಸುಮಾರು ನಾಲ್ಕು ಕೋಟಿ ರೂಪಾಯಿ ವೆಚ್ಚದಲ್ಲಿ ಪುನರ್ ನಿರ್ಮಾಣಗೊಳಿಸಿ , ಮುಂದಿನ ಮಾರ್ಚ್ ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸುವ ಯೋಜನೇ ಹಾಕಲಾಗಿದೆ,
ಮೊಗವೀರ ಸಮುದಾಯಕ್ಕೆ ಸೇರಿದ ಈಕ್ಷೇತ್ರ ಇದಾಗಿದ್ದು ಮೀನು ವ್ಯಾಪಾರ ಮಾಡುತ್ತಿದ್ದ ನಾಗಮ್ಮ ಹಾಗೂ ಬಾಳಮ್ಮ ಅವರು ಒಂದು ಜಾತ್ರೆಯಲ್ಲಿ ಪ್ರಸಾದ ಸ್ವೀಕರಿಸುವ ವೇಳೆ “ನಮ್ಮ ಊರಲ್ಲಿಯೂ ಇಂತಹ ಶಕ್ತಿ ನೆಲೆಸಿದ್ದರೆ ಉತ್ತಮ” ಎಂದು ಪ್ರಾರ್ಥಿಸಿ ಪ್ರಸಾದವನ್ನು ಮನೆಗೆ ತಂದಿದ್ದರು. ಬಳಿಕ ಅವರು ಪ್ರಸಾದವನ್ನು ಇರಿಸಿದ ಸ್ಥಳದಲ್ಲಿ ಗೆಜ್ಜೆಯ ಸದ್ದು ಕೇಳಿಬಂದಿದ್ದು, ಪ್ರಶ್ನೆ-ಚಿಂತನೆಯ ವೇಳೆ ಮಲರಾಯ ಹಾಗೂ ಬಂಟ ದೈವಗಳ ಸಾನ್ನಿಧ್ಯ ಅಲ್ಲಿ ಇರುವುದಾಗಿ ತಿಳಿದುಬಂದಿತ್ತು. ಎನ್ನುವ ಇನ್ನಲೇ ಇದೆಬಂಗ್ರಮಂಜೇಶ್ವರದ ನದಿ ತಟದಲ್ಲಿ ನೆಲೆನಿಂತಿರುವ ಈ ದೈವಸ್ಥಾನದಲ್ಲಿ ಪ್ರತಿ ವರ್ಷ ಜಾತ್ರೆ ಉತ್ಸವಾದಿಗಳು ನಡೆದು ಬರುತಿದ್ದು ಈ ದೇವಸ್ಥಾನಕ್ಕೆ ಸಂಬಂದಿಸಿದ ದೂರದ ಊರುಗಳಲ್ಲಿ ನೆಲೆಸಿರುವ ಈ ಸಮಯದಲ್ಲಿ ಸೇರುವುದು ಮಾತ್ರವಲ್ಲ ಜಾತಿ ಮತ ಭೇದವಿಲ್ಲದೆ ಊರವರು ಸಂಭ್ರಮದಲ್ಲಿ ಭಾಗಿಯಾಗುವುದು ಇಲ್ಲಿನ ವಿಶೇಷವಾಗಿದೆ