ಕಾಸರಗೋಡು : ಕಾಸರಗೋಡಿನ ಪಳ್ಳಿಕರ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಕಾರುಗಳು ಅಪಾಯಕಾರಿ ರೀತಿಯಲ್ಲಿ ರೇಸಿಂಗ್ ನಡೆಸಿದವು. ಶಾಲೆ ಬಿಡುವ ಸಮಯದಲ್ಲಿ ಮಕ್ಕಳು ಮನೆಗೆ ಮರಳುತ್ತಿದ್ದ ಸಂದರ್ಭದಲ್ಲೇ ಈ ರೇಸಿಂಗ್ ನಡೆದಿತ್ತು. ಅತಿವೇಗ ಮತ್ತು ಅಪಾಯಕಾರಿ ಚಾಲನೆ ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು.

ಸ್ಥಳಕ್ಕೆ ತಲುಪಿದ ಪೊಲೀಸರ ಮೇಲೆಯೂ ದಾಳಿ ನಡೆದಿದೆ. ರೇಸಿಂಗ್ ನಿಲ್ಲಿಸಲು ಸೂಚಿಸಿದ ಪ್ರೊಬೇಷನ್ ಎಸ್‌ಐ ಮೇಲೆ ದಾಳಿ ಮಾಡಿ ಗಾಯಗೊಳಿಸಿದ್ದರೆ. ಎಸ್‌ಐ ಪ್ರಿನ್ಸ್ ಜಾನ್ ಕಾಞ್ಞಂಗಾಡ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಈ ಘಟನೆಯಲ್ಲಿ CR7 ಸ್ಟಿಕ್ಕರ್‌ಗಳು ಅಂಟಿಸಲಾದ ಆರು ಕಾರುಗಳನ್ನು ಹಾಗೂ ವಾಹನಗಳಲ್ಲಿ ಇದ್ದವರನ್ನು ಬೇಕಲ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ದೃಶ್ಯಗಳು, ಸಿಸಿಟಿವಿ ಕ್ಯಾಮೆರಾ ದೃಶ್ಯಗಳು ಮತ್ತು ಮೊಬೈಲ್ ಫೋನ್‌ನಲ್ಲಿ ಸೆರೆಹಿಡಿದ ವೀಡಿಯೊಗಳನ್ನು ತನಿಖೆಯ ಭಾಗವಾಗಿ ಪೊಲೀಸರು ಸಂಗ್ರಹಿಸುತ್ತಿದ್ದಾರೆ.


