ಅಣ್ಣಾ ಡಿಎಂಕೆಯಲ್ಲಿ ಬಿಕ್ಕಟ್ಟು ತೀವ್ರ: ಸಾವಿರಾರು ಕಾರ್ಯಕರ್ತರು ಟಿವಿಕೆಗೆ ಸೇರ್ಪಡೆ

ತಮಿಳುನಾಡಿನಲ್ಲಿ ಅಣ್ಣಾ ಡಿಎಂಕೆ (AIADMK) ಪಕ್ಷದಲ್ಲಿ ಬಿಕ್ಕಟ್ಟು ಮತ್ತಷ್ಟು ತೀವ್ರಗೊಂಡಿದ್ದು, ಸಾವಿರಾರು ಕಾರ್ಯಕರ್ತರು ತಮಿಳಗ ವೆಟ್ರಿ ಕಳಗಂ (TVK) ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ನಾಲ್ವರು ಮಾಜಿ ಸಚಿವರು ಸೇರಿದಂತೆ 118 ಪ್ರಮುಖ ಮುಖಂಡರು ಟಿವಿಕೆಗೆ ಸೇರ್ಪಡೆಯಾದರು.

ಮಾಜಿ ಸಚಿವರಾದ ಸಿ. ವಿಜಯಭಾಸ್ಕರ್, ಎಂ.ಆರ್. ವಿಜಯಭಾಸ್ಕರ್, ಎಂ.ಎಸ್.ಎಂ. ಆನಂದ್ ಮತ್ತು ಸಿ. ವಳರ್ಮತಿ ಸೇರಿದಂತೆ ಮಾಜಿ ಸಂಸದರು, ಮಾಜಿ ಶಾಸಕರು ಹಾಗೂ ಜಿಲ್ಲಾ ಕಾರ್ಯದರ್ಶಿಗಳು ಟಿವಿಕೆಗೆ ಸೇರಿದ್ದಾರೆ. ಪಕ್ಷದ ನಾಯಕರು ಶಾಲು ಹೊದಿಸಿ ಅವರನ್ನು ಅಧಿಕೃತವಾಗಿ ಸ್ವಾಗತಿಸಿದರು.

ಈ ಕಾರ್ಯಕ್ರಮದಲ್ಲಿ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದು. ತಮಿಳುನಾಡಿನ ವಿವಿಧ ಭಾಗಗಳಿಂದ ಸುಮಾರು 200 ಬಸ್‌ಗಳಲ್ಲಿ ಎಐಎಡಿಎಂಕೆ ಕಾರ್ಯಕರ್ತರು ಮಹಾಬಲಿಪುರಂಗೆ ಆಗಮಿಸಿದ್ದರು.
ತಮ್ಮ ಕ್ಷೇತ್ರದ ಜನರ ಅಭಿಪ್ರಾಯದಂತೆ ಎಐಎಡಿಎಂಕೆ ತೊರೆದು ಟಿವಿಕೆಗೆ ಸೇರ್ಪಡೆಯಾಗಿದ್ದೇವೆ ಎಂದು ಮಾಜಿ ಸಚಿವ ಸಿ. ವಿಜಯಭಾಸ್ಕರ್ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಟಿವಿಕೆ ಪ್ರಧಾನ ಕಾರ್ಯದರ್ಶಿ ಎನ್. ಆನಂದ್, ಕೆ.ಎ. ಸೆಂಗೊಟ್ಟಯ್ಯನ್, ಆದವ್ ಅರ್ಜುನ್, ಕೆ.ಜಿ. ಅರುಣ್ ರಾಜ್ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಎಐಎಡಿಎಂಕೆ ನಾಯಕರು ಟಿವಿಕೆಗೆ ಸೇರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!