ಇಂದು ವಿಶ್ವ ಚಾಕೊಲೇಟ್ ದಿನ; ನಿಮ್ಮ ನೆಚ್ಚಿನ ಸಿಹಿತಿಂಡಿಯ ಬಗ್ಗೆ ಈ 7 ಕುತೂಹಲಕಾರಿ ಸಂಗತಿಗಳು ನಿಮಗೆ ಗೊತ್ತೇ?*

ಚಾಕೊಲೇಟ್ ಎಂದರೆ ಮಕ್ಕಳಿಗೆ ಮಾತ್ರವಲ್ಲ, ದೊಡ್ಡವರಿಗೂ ಅಚ್ಚುಮೆಚ್ಚಿನ ಸಿಹಿತಿಂಡಿ. ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿಸಿದಾಗ ಅನೇಕ ಮಂದಿಗೆ ಮೊದಲಿಗೆ ನೆನಪಾಗುವುದು ಚಾಕೊಲೇಟ್. ಚಾಕೊಲೇಟ್ ಕೇಕ್, ಚಾಕೊಲೇಟ್ ಐಸ್‌ಕ್ರೀಮ್, ಹಾಟ್ ಚಾಕೊಲೇಟ್, ಡೆತ್ ಬೈ ಚಾಕೊಲೇಟ್, ಚಾಕೊಲೇಟ್ ಫ್ಲೇವರ್ ಪಾನೀಯಗಳು, ಚಾಕೊಲೇಟ್ ಟೀ, ಚಾಕೊಲೇಟ್ ಆರ್ಟ್ ಹೀಗೆ ಚಾಕೊಲೇಟ್ ರುಚಿ ಎಲ್ಲರ ಮನಸನ್ನೂ ಗೆದ್ದಿದೆ.

ವಿಶ್ವ ಚಾಕೊಲೇಟ್ ದಿನದ ಅಂಗವಾಗಿ, ನಿಮ್ಮ ನೆಚ್ಚಿನ ಸಿಹಿತಿಂಡಿಯ ಬಗ್ಗೆ ಕೆಲವು ಕುತೂಹಲಕಾರಿ ಸಂಗತಿಗಳು ಇಲ್ಲಿವೆ:

1. ಒಂದು ಕಾಲದಲ್ಲಿ ಚಾಕೊಲೇಟ್ ಹಣದಂತೆ ಬಳಕೆಯಾಗುತ್ತಿತ್ತು

ಇಂದು ಇದು ಅಚ್ಚರಿಯೆನಿಸಬಹುದು. ಆದರೆ ನೂರಾರು ವರ್ಷಗಳ ಹಿಂದೆ ಪ್ರಾಚೀನ ಅಜ್ಟೆಕ್ (Aztec) ಸಾಮ್ರಾಜ್ಯದಲ್ಲಿ ಕೋಕೋ ಬೀಜಗಳನ್ನು ಕರೆನ್ಸಿಯಂತೆ ಬಳಸಲಾಗುತ್ತಿತ್ತು. ಜನರು ಆಹಾರ ಸೇರಿದಂತೆ ಹಲವು ವಸ್ತುಗಳನ್ನು ಖರೀದಿಸಲು ಕೋಕೋ ಬೀಜಗಳನ್ನೇ ವಿನಿಮಯ ಮಾಧ್ಯಮವಾಗಿ ಬಳಸುತ್ತಿದ್ದರು.

2. ಒಂದು ಚಾಕೊಲೇಟ್ ಬಾರ್ ತಯಾರಿಸಲು ನೂರಾರು ಕೋಕೋ ಬೀಜಗಳು ಬೇಕಾಗುತ್ತವೆ

ಸಾಮಾನ್ಯ ಗಾತ್ರದ ಒಂದು ಚಾಕೊಲೇಟ್ ಬಾರ್ ತಯಾರಿಸಲು 400ಕ್ಕೂ ಹೆಚ್ಚು ಕೋಕೋ ಬೀಜಗಳು ಅಗತ್ಯವಿರುತ್ತವೆ.

3. ಚಾಕೊಲೇಟ್ ಬಾಯಲ್ಲೇ ಕರಗುವುದಕ್ಕೆ ಇದೇ ಕಾರಣ

ಚಾಕೊಲೇಟ್‌ನ ಕರಗುವ ತಾಪಮಾನವು ಮಾನವ ದೇಹದ ಸಾಮಾನ್ಯ ಉಷ್ಣಾಂಶಕ್ಕಿಂತ ಸ್ವಲ್ಪ ಕಡಿಮೆ. ಆದ್ದರಿಂದ ಬಾಯಿಗೆ ಹಾಕಿದ ತಕ್ಷಣ ಅದು ಸುಲಭವಾಗಿ ಕರಗುತ್ತದೆ. ಇದೇ ಅದರ ಮೃದುವಾದ ಅನುಭವಕ್ಕೂ, ಅಪಾರ ಜನಪ್ರಿಯತೆಗೂ ಪ್ರಮುಖ ಕಾರಣವಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!