ಮಂಗಳೂರು :ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳುಗಾರಿಕೆ ಮತ್ತು ಕೆಂಪು ಕಲ್ಲು ಸಮಸ್ಯೆಗಳಿಗೆ ಕೂಡಲೇ ಪರಿಹಾರ ಕಾಣಬೇಕೆಂದು ಆಗ್ರಹಿಸಿ ಮಾಜಿ ಸಚಿವರಾದ ರಾಮನಾಥ್ ರೈ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು .ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕೆಂಪು ಕಲ್ಲು ಮತ್ತು ಮರಳಿನ ಲಭ್ಯತೆ ಆಗುತ್ತಾ ಇಲ್ಲ ಎನ್ನುವ ಚರ್ಚೆ ಪ್ರಸ್ತುತ ಇದೆ. ಬಿಜೆಪಿ ಚುನಾಯಿತ ಪ್ರತಿನಿಧಿಗಳು ಸಮಸ್ಯೆಗೆ ಕಾಂಗ್ರೆಸ್ ಸರ್ಕಾರ ಕಾರಣ ಎಂದು ಆರೋಪ ಮಾಡುತ್ತಿದ್ದಾರೆ.ಆದರೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುವ ಮೊದಲೇ ಸಮಸ್ಯೆ ಇತ್ತು.
ಬಿಜೆಪಿ ಸರ್ಕಾರ ಆಡಳಿತ ಸಮಯದಲ್ಲಿ ಮರಳುಗಾರಿಕೆಗೆ ಇಲ್ಲಿ ಪರವಾನಿಗೆ ಅವಕಾಶವನ್ನು ಕಲ್ಪಿಸಲಿಲ್ಲ. ಇದು ಅಕ್ರಮವಾಗಿ ಮರಳುಗಾರಿಕೆಗೆ ಪರೋಕ್ಷವಾಗಿ ಕಾರಣವಾಗಿ, ಅಲ್ಲಿಂದಲೇ ಅಕ್ರಮ ಮರಳುಗಾರಿಕೆ ಆರಂಭವಾಯಿತು.
ಕೆಂಪು ಕಲ್ಲು ಸಮಸ್ಯೆಗಳಿಗೆ ಇಲ್ಲಿನ ಶಾಸಕರು ಪರಿಹಾರ ಕ್ರಮ ಕೈಗೊಳ್ಳಬೇಕು.ಸರಕಾರದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ. ಜನರಿಗೆ ಕೆಂಪು ಕಲ್ಲು ,ಮರಳು ಸುಲಭವಾಗಿ ಸಿಗಬೇಕು. ಇಂದು ಇದು ಸರಿಯಾಗಿ ಸಿಗದೆ ಕೆಲಸ ಪೂರ್ತಿಯಾಗದೆ ಕಾಮಗಾರಿಗಳು ಅರ್ಧದಲ್ಲೇ ನಿಂತಿದೆ.ಶಾಸಕರು ರಾಜಕೀಯ ಲಾಭ ಬಯಸದೆ ಸಮಸ್ಯೆಗಳಿಗೆ ಕೂಡಲೇ ಪರಿಹಾರ ನೀಡಬೇಕು.
ಕೆಂಪು ಕಲ್ಲಿನ ದರವನ್ನು ಕಡಿಮೆ ಮಾಡುವಂತೆ , ನಾನ್ ಸಿ ಆರ್ ಜೆಡ್ ನಲ್ಲಿ ಮರಳುಗಾರಿಕೆಗೆ ಕಾನೂನು ಬದ್ಧ ಅವಕಾಶ ಕಲ್ಪಿಸಲು ಸರಕಾರ ಅವಕಾಶ ಕಲ್ಪಿಸುವಂತೆ ಕೇಳಿಕೊಂಡಿದೇನೆ.ಚುನಾಯಿತ ಪ್ರತಿನಿಧಿಗಳು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಬದಲು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ ಎಂದರು.ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಬ್ಲಾಕ್ ಅಧ್ಯಕ್ಷರಾದ ಜೆ ಅಬ್ದುಲ್ ಸಲೀಮ್, ಪ್ರಕಾಶ್ ಸಾಲಿಯಾನ್, ಶುಭೋದಯ ಆಳ್ವಾ, ಉಪಸ್ಥಿತರಿದ್ದರು