ಧಾರಾಕಾರವಾಗಿ ಸುರಿಯುವ ಮಳೆಯಿಂದ ಮಂಜೇಶ್ವರದ ಹಲವೆಡೆ ಮನೆ, ಮಸೀದಿ, ವಿದ್ಯಾಸಂಸ್ಥೆಗಳು ಜಲಾವೃತ

ಮಂಜೇಶ್ವರ : ಧಾರಾಕಾರವಾಗಿ ಸುರಿಯುವ ಮಳೆಯಿಂದ ಮಂಜೇಶ್ವರದ ಹಲವೆಡೆ ಮನೆ, ಮಸೀದಿ, ವಿದ್ಯಾಸಂಸ್ಥೆಗಳು ಜಲಾವೃತಗೊಂಡಿದೆ
ಕಳೆದ ಕೆಲವು ದಿನಗಳಿಂದ ಮಂಜೇಶ್ವರ ಉಪ್ಪಳಗಳಲ್ಲಿ ಪ್ರಳಯ ಸಂಭವಿಸಲು ಸಾಧ್ಯತೆ ಇರುವ ಬಗ್ಗೆ ಸಂಬಂಧ ಪಟ್ಟ ಇಲಾಖೆ ಸೂಚನೆ ನೀಡಿದ್ದರೂ ಇದಕ್ಕೆ ಬೇಕಾಗಿ ಪೂರ್ವ ಸಿದ್ಧತೆಗಳನ್ನು ನಡೆಸಬೇಕಾಗಿದ್ದ ಸ್ಥಳೀಯಾಡಳಿತ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮೌನವನ್ನು ಪಾಲಿಸಿರುವುದಾಗಿ ಆರೋಪ ಕೇಳಿ ಬಂದಿದೆ.


ಕಳೆದ ರಾತ್ರಿ ಸುರಿದ ಬಿರುಸಿನ ಮಳೆಗೆ ವರ್ಕಾಡಿ ಪಂಚಾಯತು ವ್ಯಾಪ್ತಿಯ ಎರಡನೇ ವಾರ್ಡಿನಲ್ಲಿರುವ ಮುಡಿಮಾರು – ಬೇಕರಿ ರಸ್ತೆ ಪೂರ್ಣವಾಗಿ ಕುಸಿದು ವಾಹನ ಸಂಚಾರ ಪೂರ್ಣವಾಗಿ ಸ್ಥಗಿತಗೊಂಡಿದೆ.
ಅದೇ ರೀತಿ ಮಂಜೇಶ್ವರ ಪೊಸೋಟು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಮಳ್ ಹರ್ ವಿದ್ಯಾಸಂಸ್ಥೆ ಕಟ್ಟಡ ಪೂರ್ಣವಾಗಿ ಜಲಾವೃತಗೊಂಡು ಇಲ್ಲಿ ಹಾಸ್ಟೆಲ್ ಸೌಕರ್ಯಗಳೊಂದಿಗೆ ಕಲಿಯುತ್ತಿರುವ ವಿದ್ಯಾರ್ಥಿಗಳನ್ನು ಕೆಲಗಿನ ಮಹಡಿಯಿಂದ ಮೇಲಿನ ಮಹಡಿಗೆ ಸ್ಥಳಾಂತರಿಸಲಾಗಿದೆ.


ಅದೇ ರೀತಿ ದೈಗೋಳಿ ಪರಿಸರದಲ್ಲಿ ಗುಡ್ಡೆಯೊಂದು ಕುಸಿದ ಹಿನ್ನೆಲೆಯಲ್ಲಿ ಧೈತ್ಯಕಾರದ ಮರವೊಂದು ರಸ್ತೆಗೆ ಉರುಳಿ ಬಿದ್ದು ಬಳಿಕ ಅಗ್ನಿಶಾಮಕ ದಳ ಆಗಮಿಸಿ 5 ಗಂಟೆಗಳ ಕಾರ್ಯಾಚರಣೆ ನಡೆಸಿ ಮರ ಹಾಗೂ ಮಣ್ಣನ್ನು ತೆರವುಗೊಳಿಸಲಾಯಿತು.
ಅದೇ ರೀತಿ ಮಂಜೇಶ್ವರ ನಿವಾಸಿ ಮಚ್ಚ ಎಂಬವರ ಮನೆ ಪೂರ್ಣವಾಗಿ ಕುಸಿದು ಬಿದ್ದಿದೆ. ಮನೆಯೊಳಗಿದ್ದವರು ಯಾವುದೇ ಅಪಾಯಗಳಿಲ್ಲದೆ ಪಾರಾಗಿದ್ದಾರೆ.

ಅದೇ ರೀತಿ ಕುಂಜತ್ತೂರು ಪದವು ನಿವಾಸಿ ಆಹ್ಮದ್ ಭಾವ ಎಂಬವರ ಬಾವಿ ಕುಸಿದು ಬಿದ್ದಿದೆ. ಅದೇ ರೀತಿ ಮಚ್ಚಂಪ್ಪಾಡಿ ಜುಮಾ ಮಸೀದಿ ಜಲಾವೃತಗೊಂಡಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!