ಕಾಸರಗೋಡು: ಹಸುವನ್ನು ಮೇಯಿಸಲು ತೆರಳಿದ್ದ ವೃದ್ಧೆಯೊಬ್ಬರು ಕಾಲು ಜಾರಿ ಹಳ್ಳಕ್ಕೆ ಬಿದ್ದು ದಾರುಣವಾಗಿ ಸಾವನ್ನಪ್ಪಿದ್ದಾರೆ.ಬೇಕಲ ಪೊಲೀಸ್ ಠಾಣಾ ವ್ಯಾಪ್ತಿಯ ಪೆರಿಯ, ಮಿನ್ನಂಕುಳಂ, ಪುಳಿಕಾಲ್, ಕಾರ್ಯಮೊಟ್ಟೆಯ ನಿವಾಸಿ ದಿವಂಗತ ದಾಮೋದರ ಅವರ ಪತ್ನಿ ರುಕ್ಮಿಣಿ (71) ಸಾವನ್ನಪ್ಪಿದ ದುರ್ದೈವಿ. ಬುಧವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ.

ಈ ಸಂಬಂಧ ಬೇಕಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಶವ ಶರೀರವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ.



