ತಮ್ಮನನ್ನು ಕೊಡಲಿಯಿಂದ ಕೊಲೆ ಮಾಡಿದ ಅಣ್ಣ ಬಂಧನ

ದ.ಕ ಜಿಲ್ಲೆ ಮಂಗಳೂರು ತಾಲೂಕಿನ ಕಾಟಿಪಳ್ಳ ಗ್ರಾಮ, ಚೊಕ್ಕಬೆಟ್ಟು, ಕೃಷ್ಣಮಠ ರಸ್ತೆಯ ಶ್ರೀಮತಿ ರೇಖಾ ಎಂಬವರ ಬಾಡಿಗೆ ಮನೆಯಲ್ಲಿ ಕಳೆದ 05 ವರ್ಷಗಳಿಂದ ಶಿವಲೀಲಾ ಮತ್ತು ಆಕೆಯ ಇಬ್ಬರು ಮಕ್ಕಳಾದ ಸೋಮನಾಥ ಮತ್ತು ಮಲ್ಲಿಕಾರ್ಜುನ ರವರ ವಾಸ್ತವ್ಯವಿದ್ದು ಕೂಲಿ ಕೆಲಸ ಮಾಡಿಕೊಂಡಿರುತ್ತಾರೆ.

ದಿನಾಂಕ: 19-07-2026 ರಂದು ರಾತ್ರಿ 11.00 ಗಂಟೆಗೆ ಆರೋಪಿಯಾದ ಸೋಮನಾಥ, ಪ್ರಾಯ 21 ವರ್ಷ, ತಂದೆ: ದಿ|| ಪರಸಪ್ಪ, ವಾಸ: ರೇಖಾ ರವರ ಬಾಡಿಗೆ ಮನೆ, ಚೊಕ್ಕಬೆಟ್ಟು, ಮಂಗಳೂರು ತಾಲೂಕು, ಖಾಯಂ ವಾಸ: ತಗ್ಯಾಳ ಗ್ರಾಮ, ಕುಷ್ಠಗಿ ತಾಲೂಕು, ಕೊಪ್ಪಳ ಜಿಲ್ಲೆ, ಎಂಬಾತನು ಆತನ ತಮ್ಮನಾದ ಮಲ್ಲಿಕಾರ್ಜುನ ರವರು ಯಾವುದೋ ಹುಡುಗಿಯೊಂದಿಗೆ ಮೊಬೈಲ್ ನಲ್ಲಿ ಮಾತನಾಡುತ್ತಿದ್ದು ಆ ಸಮಯ ಆರೋಪಿತನು ವಿರೋಧವನ್ನು ವ್ಯಕ್ತಪಡಿಸಿದ್ದು ಇದಕ್ಕೆ ತಮ್ಮನಾದ ಮಲ್ಲಿಕಾರ್ಜುನನು ಉಡಾಫೆಯಿಂದ ಆರೋಪಿಗೆ ಬೈದಿದ್ದರಿಂದ ಕೋಪಗೊಂಡ ಆರೋಪಿತನು ತನ್ನ ತಮ್ಮ ಮಲ್ಲಿಕಾರ್ಜುನನು ಮಲಗಿದ ನಂತರ ಮನೆಯಲ್ಲಿಯೇ ಇದ್ದ ಕೊಡಲಿಯಿಂದ ತಲೆ ಹಾಗೂ ಮುಖಕ್ಕೆ ತೀವ್ರ ಸ್ವರೂಪದ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿರುತ್ತಾನೆ.

ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ನಂಬ್ರ 89/2026 ಕಲಂ 103(1) ಬಿ.ಎನ್.ಎಸ್ ರಂತೆ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಂಡಿರುವುದಾಗಿದೆ. ಆರೋಪಿ ಸೋಮನಾಥನು ಕೃಷ್ಣಾಪುರ ಮಠ ರಸ್ತೆಯ ಪರಿಸರದಲ್ಲಿ ಪೊದೆಯಲ್ಲಿ ಅವಿತುಕೊಂಡಿದ್ದವನನ್ನು ಪತ್ತೆಮಾಡಿ ದಸ್ತಗಿರಿ ಮಾಡಿ ವಿಚಾರಣೆ ನಡೆಸಲಾಗಿ ತನ್ನ ತಪ್ಪನ್ನು ಒಪ್ಪಿಕೊಂಡಿರುತ್ತಾನೆ. ಸದ್ರಿ ಆರೋಪಿತನನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.

SHARE
Loading spinner

Leave a Reply

Your email address will not be published. Required fields are marked *

error: Content is protected !!