ಎಸ್‌ಐಆರ್ ಮಹಾ ಅಭಿಯಾನ: ಕಂಕನಾಡಿ ವಾರ್ಡ್‌ಗಳಲ್ಲಿ ಶಾಸಕ ವೇದವ್ಯಾಸ ಕಾಮತ್ ಪರಿಶೀಲನೆ

ಎಸ್ಐಆರ್ ಮಹಾ ಅಭಿಯಾನದ ಪ್ರಯುಕ್ತ ಮಂಗಳೂರು ನಗರ ದಕ್ಷಿಣ ಮಂಡಲದ ವಿವಿಧ ವಾರ್ಡ್ ಗಳಲ್ಲಿ ಶಾಸಕ ವೇದವ್ಯಾಸ ಕಾಮತ್ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ದಕ್ಷಿಣ ಮಹಾಶಕ್ತಿ ಕೇಂದ್ರದ 49 ನೇ ಕಂಕನಾಡಿ ವಾರ್ಡಿನ ಬೂತ್ ಸಂಖ್ಯೆ 182 ಹಾಗೂ 185 ಕ್ಕೆ ಭೇಟಿ ನೀಡಿದ ಶಾಸಕರು, ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಈ ಎಸ್‌ಐಆರ್ ಪ್ರಕ್ರಿಯೆಯು ಅತ್ಯಂತ ಮಹತ್ವದ್ದಾಗಿದ್ದು ಅದರ ಉದ್ದೇಶದ ಸಾಕಾರಕ್ಕಾಗಿ ಎಲ್ಲರ ಸಹಕಾರ ಅತ್ಯಗತ್ಯವಾಗಿದೆ. ಎಲ್ಲಾ ಮತದಾರರು ಜವಾಬ್ದಾರಿಯುತವಾಗಿ ಸಹಕರಿಸುವಂತೆ ಕಳಕಳಿಯ ವಿನಂತಿ ಎಂದರು.

ಈ ವೇಳೆ ಬಿಜೆಪಿ ಪ್ರಮುಖರಾದ ಪ್ರವೀಣ್ ನಿಡ್ಡೇಲ್, ಕಿರಣ್ ರೈ, ರಾಮ್ ಪ್ರಸಾದ್, ಚೇತನ್ ನೆಕ್ಕರೆ ಮಾರ್, ಮೌನಿಶ್ ಚೌಟ, ಪ್ರಕಾಶ್ ಗರೋಡಿ, ತನುಜಾ ರೇಖಾ ಶೆಟ್ಟಿ, ರೂಪಾ ಮುರಳಿಧರ್, ಚಂದ್ರಶೇಖರ್, ಮಮತಾ ಪಂಡಿತ್, ಯಶೋಧಾ ಗಟ್ಟಿ, ಸೇರಿದಂತೆ ವಿವಿಧ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!