ಅಮೃತ ಪ್ರಕಾಶ ಪತ್ರಿಕೆಯ 12ನೇಯ ವಾರ್ಷಿಕೋತ್ಸವ

ಮಾಲತಿ ಶೆಟ್ಟಿ, ಮಾಣೂರು ಸಂಪಾದಕತ್ವದ ಅಮೃತ ಪ್ರಕಾಶ ಪತ್ರಿಕೆಯ 12ನೇ ವರ್ಷದ ವಿಶೇಷ ಸಂಚಿಕೆ ಬಿಡುಗಡೆ ಕಾರ್ಯಕ್ರಮ ಮಂಗಳೂರಿನ ಪತ್ರಿಕಾ ಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ಮಾಜಿ ರಾಜ್ಯಾಧ್ಯಕ್ಷರಾದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ವಹಿಸಿದರು .ಪತ್ರಿಕೆ ನಡೆಸುವುದು ಸುಲಭ ಕೆಲಸವಲ್ಲ ಅದಕ್ಕೆ ಕಠಿಣ ಪರಿಶ್ರಮ ಅಗತ್ಯ. ಪತ್ರಿಕೆಯ ಜೊತೆಗೆ ಸಾಹಿತ್ಯ ಪರ ಕಾರ್ಯ ನಿರಂತರವಾಗಿ ಮಾಡುತ್ತಿದ್ದಾರೆ . ಅಮೃತ ಪ್ರಕಾಶ ಪತ್ರಿಕೆಗೆ ಶುಭ ಹಾರೈಸಿದರು. ಅಮೃತ ಪ್ರಕಾಶ ಪತ್ರಿಕೆಯ 12ನೇಯ ವರುಷದ ವಿಶೇಷ ಸಂಚಿಕೆ ಬಿಡುಗಡೆಯನ್ನು ಹೊಸದಿಗಂತ ಪತ್ರಿಕೆಯ ಸಂಪಾದಕರು ಹಾಗೂ ಮುಖ್ಯ ಕಾರ್ಯನಿರ್ವಾಧಿಕಾರಿ p.s ಪ್ರಕಾಶ್ ರವರು ಬಿಡುಗಡೆ ಮಾಡಿ. ಉತ್ತಮ ಗುಣಮಟ್ಟದ ಪತ್ರಿಕೆಯನ್ನು ನಡೆಸುತ್ತಾ ಸಮಾಜಕ್ಕೆ ತನ್ನಿ0ದ ಆಗುವ ಕೊಡುಗೆ ನೀಡುತ್ತಾ ಬಂದಿದ್ದಾರೆ.

ಇವರ ಕಾರ್ಯ ಶ್ಲಾಘನೀಯ ಎಂದರು.ಮುಖ್ಯ ಅತಿಥಿಯಾಗಿ ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗೂ ಸುರತ್ಕಲ್ ಬಂಟರ ಸಂಘದ ಅಧ್ಯಕ್ಷರಾದ ಬಾಳ ಜಗನ್ನಾಥ ಶೆಟ್ಟಿರವರು ಉಪಸ್ಥಿತರಿದ್ದರು. ಅಮೃತ ಪ್ರಕಾಶ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ,ಅಮೃತ ಪ್ರಕಾಶ ಪತ್ರಿಕೆಯ ಸಂಪಾದಕ ಮಂಡಳಿ ಸದಸ್ಯರಾದ ಸತ್ಯ ಪ್ರಕಾಶ್ ಶೆಟ್ಟಿ ,ಶಿಕ್ಷಕಿ ಸುರೇಖಾ ಯಾಳವಾರ ಉಪಸ್ಥಿತರಿದ್ದರು.ಡಾ.ಮಾಲತಿ ಶೆಟ್ಟಿ ಮಾಣೂರು ಸ್ವಾಗತಿಸಿದರು . ಶಿಕ್ಷಕಿ ಲೇಖಕಿ ಸುರೇಖಾ ಯಾಳವಾರ ಕಾರ್ಯಕ್ರಮ ನಿರೂಪಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!