ಮಂಗಳೂರು : ವೃತ್ತಿಪರ ಶಿಕ್ಷಣದಲ್ಲಿ ಮೇಲುಗೈ ಸಾಧಿಸಿರುವ Mifse & Minerva ಕಾಲೇಜು ತನ್ನ 19 ವರ್ಷದ ಸಾಧನಾ ಪಯಣದಲ್ಲಿ ಮತ್ತೊಂದು ಮಹತ್ವದ ಮೈಲುಗಲ್ಲನ್ನು ಸಾಧಿಸಿದೆ, ಮಿನರ್ವಾ ಕಾಲೇಜಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU) ಅನುಬಂಧ ಲಭಿಸಿದ್ದು ವೃತ್ತಿಪರ ಕೋಸ್೯ ಗಳನ್ನು ಪ್ರಾರಂಭಿಸಲು ಅವಕಾಶ ದೊರೆತಿದೆ ಎಂದು ಕಾಲೇಜಿನ ಅಧ್ಯಕ್ಷರಾದ ವಿನೋದ್ ಕೆ.ಜಾನ್ ಹೇಳಿದರು
ಅವರು ಪತ್ರಿಕಾಭವನದಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ 2007ರಲ್ಲಿ ಸ್ಥಾಪನೆಯಾದ ಮಿಫ್ಸ್ ಕರ್ನಾಟಕದಲ್ಲಿ ಫೈರ್ & ಸೆಫ್ಟಿ ಹಾಗೂ HSE ಶಿಕ್ಷಣವನ್ನು ಪರಿಚಯಿಸಿದ ಮುಂಚೂಣಿ ಸಂಸ್ಥೆಯಾಗಿದ್ದು ಮಂಗಳೂರು ವಿಶ್ವವಿದ್ಯಾಲಯ ಹಾಗೂ ಭಾರತ ಸರ್ಕಾರದ NSDC – Skill India ಮಾನ್ಯತೆಗಳನ್ನು ಪಡೆದಿದೆ. ಸಂಸ್ಥೆಯು ಸಾವಿರಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ದೇಶೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉದ್ಯೋಗಾವಕಾಶಗಳನ್ನು ಕಲ್ಪಿಸಿದೆ ಎಂದರು.
ಇದೀಗ VTU ಅನುಬಂಧಿತ ವ್ರತ್ತಿಪರ ಕೋರ್ಸ್‌ಗಳ ಭವ್ಯ ಉದ್ಘಾಟನೆಯನ್ನು ದಿನಾಂಕ 4 ರಂದು ಬೆಳಿಗ್ಗೆ 10 ಗಂಟೆಗೆ ಮಂಗಳೂರು ಅಡ್ಯಾರ್ ನ NH-75ರಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಹೊಸ ಕ್ಯಾಂಪಸ್‌ನಲ್ಲಿ ಜರಗಲಿರುವುದು, ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಯು.ಟಿ ಖಾದರ್ , ಕರ್ನಾಟಕ ವಿಧಾನ ಸಭಾ ಸ್ಫೀಕರ್, ಡಾ.ವಿದ್ಯಾಶಂಕರ್ ಮಾನ್ಯ ಕುಲಪತಿ VTU, ಪಿ.ಎಸ್ ಯಡಿಪತ್ತಾಯ,ಮಾನ್ಯ ಉಪ ಕುಲಪತಿಗಳು ಮಂಗಳೂರು ವಿ.ವಿ, ಪ್ರೋ.ಹರೀಶ್ ಶೆಟ್ಟಿ ಪ್ರಿನ್ಸಿಪಲ್ ಕೆಪಿಟಿ,ಹಾಗೂ ಪ್ರೋ.ಜಗದೀಶ ಭಾಗವಹಿಸಲಿದ್ದಾರೆ. ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್ ಮನೋಜ್ ಪಿ.ವಿ, ಯಶವಂತ ಗೋಪಾಲ್ ಶೆಟ್ಟಿ ,ಪ್ರಥ್ವಿ ಚರಣ್ ಮೊದಲಾದವರು ಉಪಸ್ಥಿತರಿದ್ದರು.