ಲಾರಿ ಹರಿದು ಚಿಕಿತ್ಸೆಯಲ್ಲಿದ್ದ ಎರಡು ವರ್ಷದ ಮಗು ಸಾವು

ಕಾಸರಗೋಡು : ​ಪಯ್ಯನ್ನೂರಿನ ವಿಲಾತರ ಚುಮುಡುತಾಂಗಿ -ಕೆ.ಎಸ್.ಡಿ.ಪಿ ರಸ್ತೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಎರಡು ವರ್ಷದ ಮಗು ಐಸಾಂ ಸಾವನ್ನಪ್ಪಿದೆ.

​ಕಳೆದ ದಿನ ತಾಯಿಯೊಂದಿಗೆ ರಸ್ತೆ ದಾಟುತ್ತಿದ್ದಾಗ ನಿಯಂತ್ರಣ ತಪ್ಪಿದ ಲಾರಿ ಇವರಿಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ ತಾಯಿ ಹಾಗೂ ಮಗುವಿಗೆ ಗಂಭೀರ ಗಾಯಗಳಾಗಿದ್ದವು. ಕೂಡಲೇ ಇವರನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಣ್ಣೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು.

ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಗು ಕೊನೆಯುಸಿರೆಳೆದಿದೆ.

​ಪೊಲೀಸ್ ಇನ್ಕ್ವೆಸ್ಟ್ ನಂತರ ಮೃತದೇಹವನ್ನು ಚುಮಡುತಾಂಗಿಯ ಕುಟುಂಬದ ಮನೆಗೆ ತರಲಾಗಿದ್ದು, ಅಂತ್ಯಸಂಸ್ಕಾರವು ಮಂಡೂರು ಜುಮಾ ಮಸೀದಿ ಖಬರ್‌ಸ್ಥಾನ್‌ನಲ್ಲಿ ನೆರವೇರಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!