ಮಾದಕ ದ್ರವ್ಯ ಮಾಫಿಯಾ ವಿರುದ್ಧ ಸಮಾಜವೇ ‘ಆಪರೇಷನ್ ತೂಫಾನ್ ವಾರಿಯರ್ಸ್’ ಆಗಬೇಕು: ಗೃಹ ಸಚಿವ ರಮೇಶ್ ಚೆನ್ನಿತಲ

​ಕಾಸರಗೋಡು : ಯುವ ಪೀಳಿಗೆಯನ್ನು ವಿನಾಶದತ್ತ ಕೊಂಡೊಯ್ಯುತ್ತಿರುವ ಮಾದಕ ದ್ರವ್ಯ ವ್ಯಾಪಾರಿಗಳನ್ನು ಬಗ್ಗುಬಡಿಯಲು ಇಡೀ ಸಮಾಜವೇ ‘ಆಪರೇಷನ್ ತೂಫಾನ್ ವಾರಿಯರ್ಸ್’ ಆಗಿ ನಿಲ್ಲಬೇಕು ಎಂದು ರಾಜ್ಯ ಗೃಹ ಸಚಿವ ರಮೇಶ್ ಚೆನ್ನಿತಲ ಕರೆ ನೀಡಿದ್ದಾರೆ.

​ವಿದ್ಯಾನಗರದ ಶಾಲೆಯಲ್ಲಿ ‘ಆಪರೇಷನ್ ತೂಫಾನ್’ ಜನಜಾಗೃತಿ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ತಾಯಂದಿರ ಕಣ್ಣೀರು ಮತ್ತು ಕುಟುಂಬಗಳ ಛಿದ್ರತೆ ಗಮನಿಸಿ ಈ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದರು.

ಸರ್ಕಾರವಿರುವವರೆಗೆ ಈ ಅಭಿಯಾನ ನಿರಂತರವಾಗಿ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.

​ಕರ್ನಾಟಕದ ಗಡಿಯಾಚೆಗಿನ ಅಕ್ರಮ ತಡೆಯಲು ಕಾವಲು ಕಾಯಲಾಗುತ್ತಿದ್ದು, ಈ ಕುರಿತು ಕರ್ನಾಟಕ ಮುಖ್ಯಮಂತ್ರಿಗಳ ಜತೆ ಚರ್ಚಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಸಂಸದ ರಾಜಮೋಹನ್ ಉಣ್ಣಿತ್ತಾನ್ ಸಭೆಯಲ್ಲಿ ಪ್ರತಿಜ್ಞೆ ಬೋಧಿಸಿದರು.

​ಶಾಸಕ ಕಲ್ಲಟ್ರ ಮಾಹಿನ್ ಹಾಜಿ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿತಿನ್ ರಾಜ್, ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!